alex Certify
ಕನ್ನಡ ದುನಿಯಾ       Mobile App
       

Kannada Duniya

ತೀವ್ರ ವಿವಾದ ಎಬ್ಬಿಸಿದೆ ಅಫ್ಘಾನಿಸ್ತಾನದ ಈ ಮಗುವಿನ ಹೆಸರು

ಕಟ್ಟಾ ಮುಸ್ಲಿಂ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ಮಗುವಿಗೆ ಡೊನಾಲ್ಡ್ ಟ್ರಂಪ್ ಅಂತಾ ಹೆಸರಿಟ್ಟಿರೋದು ವಿವಾದಕ್ಕೆ ಕಾರಣವಾಗಿದೆ. ಕಾಬುಲ್ ನಿವಾಸಿಗಳಾದ ಸೈಯದ್ ಅಸಾದುಲ್ಲ ಪೂಯ ಮತ್ತವನ ಪತ್ನಿ ತಮ್ಮ ಮೂರನೇ ಮಗುವಿಗೆ ಡೊನಾಲ್ಡ್ ಟ್ರಂಪ್ ಅಂತಾ ಹೆಸರಿಟ್ಟಿದ್ದಾರೆ.

ಮಗುವಿಗೆ ಟ್ರಂಪ್ ಎಂದು ಹೆಸರಿಟ್ಟಿರುವುದಕ್ಕೆ ಅಸಭ್ಯ ಮತ್ತು ಅವಮಾನಕರ ಕಮೆಂಟ್ ಗಳು ಬರುತ್ತಿವೆಯಂತೆ. ಟ್ರಂಪ್ ಹೆಸರಿಟ್ಟ ತಪ್ಪಿಗೆ ಸೈಯದ್ ನನ್ನು ಕೊಲ್ಲುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ. ಇನ್ನೊಂದಷ್ಟು ಮಂದಿ ಮಗನ ಬದುಕನ್ನೇ ಹಾಳು ಮಾಡುತ್ತಿದ್ದೀಯಾ ಎಂದು ಟೀಕಿಸಿದ್ದಾರೆ.

ಮಗನ ಹೆಸರು ಇಷ್ಟೊಂದು ವಿವಾದ ಹುಟ್ಟಿಸಬಹುದು ಅನ್ನೋ ಕಲ್ಪನೆ ಕೂಡ ಸೈಯದ್ ಗೆ ಇರಲಿಲ್ಲ. ಶಿಕ್ಷಕನಾಗಿರೋ ಸೈಯದ್, ಮಗ ಟ್ರಂಪ್ ರಂತೆ ಯಶಸ್ವಿ ಉದ್ಯಮಿಯಾಗಲಿ ಅನ್ನೋ ಆಸೆಯಿಂದ ಅವರ ಹೆಸರಿಟ್ಟಿದ್ದ. ಮನೆಬಿಟ್ಟು ಹೋಗುವಂತೆ ಅಕ್ಕಪಕ್ಕದವರು ಕೂಡ ಬೆದರಿಕೆ ಹಾಕುತ್ತಿರುವುದರಿಂದ ಆತ ಅನಿವಾರ್ಯವಾಗಿ ಫೇಸ್ಬುಕ್ ಅಕೌಂಟ್ ಕ್ಲೋಸ್ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...