alex Certify
ಕನ್ನಡ ದುನಿಯಾ       Mobile App
       

Kannada Duniya

ಉಸಿರಾಡದ ಮಗುವಿಗೆ ಮತ್ತೆ ಜೀವ ಕೊಟ್ಟ ವೈದ್ಯರು

ವೈದ್ಯಕೀಯ ಲೋಕ ಆಧುನಿಕತೆಯತ್ತ ತೆರೆದುಕೊಳ್ಳುತ್ತಿರುವುದು ಅನೇಕರ ದುಃಖವನ್ನು ಕಡಿಮೆ ಮಾಡುವಂತೆ ಮಾಡಿದೆ. ನವಜಾತ ಶಿಶುವೊಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಉಸಿರಾಡುವುದನ್ನೇ ನಿಲ್ಲಿಸಿದ್ದು ಅದಕ್ಕೀಗ ಪುನರ್ಜನ್ಮ ಸಿಕ್ಕಿದೆ.

ಇಂಗ್ಲೆಂಡ್‌ನ ಆಸ್ಪತ್ರೆಯಲ್ಲಿ ಇಂತಹ ಅತ್ಯಾಧುನಿಕ ಚಿಕಿತ್ಸೆ ನೀಡಲಾಗಿದ್ದು, 90 ನಿಮಿಷಗಳ ಕಾಲ ನೀಡಿದ ಚಿಕಿತ್ಸೆಯಲ್ಲಿ ಮಗು ಮತ್ತೆ ಉಸಿರಾಡಲಾರಂಭಿಸಿದೆ. ಮಿದುಳಿಗೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗದೇ ಇದ್ದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶೈಥ್ಯಾಗಾರದಂತಹ ವ್ಯವಸ್ಥೆಯಲ್ಲಿ ಶಿಶುಗಳನ್ನಿಟ್ಟು, ತಾಪಮಾನ ನಿಯಂತ್ರಿಸಿ, ಶಿಶುವನ್ನು ಸಹಜ ದೇಹದ ಆರೋಗ್ಯಕ್ಕೆ ತರಲಾಗುತ್ತದೆ.

ಇಂತಹ ವಿಶೇಷ ಚಿಕಿತ್ಸಾ ವಿಧಾನದಲ್ಲಿ ಉಸಿರಾಡದ ಮಗುವನ್ನು ಮೂರು ದಿನಗಳ ಕಾಲ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಚಿಕಿತ್ಸೆಗೆ ವಿಶೇಷ ವ್ಯವಸ್ಥೆಯುಳ್ಳ ಅಂಬ್ಯುಲೆನ್ಸ್‌ ಇದ್ದು, ಮಗುವನ್ನು ಇದರಲ್ಲಿರಿಸಿ, 3 ದಿನ ಚಿಕಿತ್ಸೆ ನೀಡಿ ಬದುಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...