alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಗುವಿಗೆ 15 ಕೈಬೆರಳು, 16 ಕಾಲ್ಬೆರಳು !

todler

ದಕ್ಷಿಣ ಚೀನಾದ ದಂಪತಿಗೆ ಒಟ್ಟು 31 ಬೆರಳುಗಳನ್ನೊಳಗೊಂಡ ಮಗುವೊಂದು ಜನಿಸಿದೆ. ಮೂರು ತಿಂಗಳ ಈ ಮಗುವಿನ ಕೈಗಳಲ್ಲಿ 15 ಬೆರಳುಗಳು ಮತ್ತು ಕಾಲುಗಳಲ್ಲಿ 16 ಬೆರಳುಗಳಿವೆ. ಒಂದು ಕೈನಲ್ಲಿ ಎಂಟು ಬೆರಳುಗಳಿದ್ದರೆ, ಮತ್ತೊಂದು ಕೈನಲ್ಲಿ 7 ಬೆರಳುಗಳಿವೆ. ಎರಡೂ ಕಾಲುಗಳಲ್ಲಿ ತಲಾ ಎಂಟೆಂಟು ಬೆರಳುಗಳಿವೆ ಎಂದು ‘ಪೀಪಲ್ಸ್ ಡೈಲಿ ಆನ್ ಲೈನ್’ ವರದಿ ಮಾಡಿದೆ.

ಈ ಮಗುವಿಗೆ ಎರಡೂ ಕೈಗಳಲ್ಲಿ ಹಸ್ತಗಳೇನೋ ಇವೆ, ಆದರೆ ಹೆಬ್ಬೆರಳುಗಳೇ ಇಲ್ಲ. ಅಗತ್ಯಕ್ಕಿಂತ ಹೆಚ್ಚು ಬೆರಳುಗಳು ಮೂಡಿವೆ. ಇಂತಹ ಪ್ರಕರಣಗಳು ಅಪರೂಪ ಎಂದು ಶೆನ್ಜೆನ್ ಪ್ರಾಂತ್ಯದ ಫೂಟೇನ್ ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹಾಂಗ್ ಹಾಂಗ್ ಎಂಬ ಹೆಸರಿನ ಈ ಮಗುವಿನ ತಾಯಿಯ ಕೈಗಳಲ್ಲೂ ಹೆಚ್ಚುವರಿ ಬೆರಳುಗಳು ಇವೆ. ಈ ಸಮಸ್ಯೆ ತನ್ನ ಮಗುವಿಗೆ ಬರಬಾರದೆಂದು ಆಕೆ ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗೊಳಪಟ್ಟರೂ ಪ್ರಯೋಜನವಾಗದೆ ಈಗ ಆಘಾತ ಎದುರಿಸುವಂತಾಗಿದೆ.

ಮೂಳೆಗಳು ಬಲಿಯುವ ಮುನ್ನವೇ ಶಸ್ತ್ರಚಿಕಿತ್ಸೆ ಮೂಲಕ ಈ ಸಮಸ್ಯೆಯನ್ನು ಸರಿಪಡಿಸಬಹುದಾದರೂ ಅದಕ್ಕಾಗಿ ದುಬಾರಿ ವೆಚ್ಚ ಭರಿಸಲು ಸಾಧ್ಯವಾಗದೆ ಬಡ ತಂದೆ ಜೋವು ಚೆಂಗ್ಲಿನ್ ದಾನಿಗಳ ಮೊರೆ ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...