alex Certify
ಕನ್ನಡ ದುನಿಯಾ       Mobile App
       

Kannada Duniya

2035 ರೊಳಗೆ ಹೆಚ್ಚಾಗಲಿದೆ ಈ ಧರ್ಮದ ಮಕ್ಕಳ ಸಂಖ್ಯೆ

2035

ಮುಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಮುಸ್ಲಿಂ ಮಕ್ಕಳು ಜನಿಸಲಿದ್ದಾರೆಂದು ಸಂಶೋಧನೆಯೊಂದು ಹೇಳಿದೆ. ಅಮೆರಿಕಾ ಸಂಶೋಧನಾ ಕಂಪನಿ ಪ್ಯು ರಿಸರ್ಚ್ ಸೆಂಟರ್ ಪ್ರಕಾರ, ಮುಂದಿನ 20 ವರ್ಷಗಳಲ್ಲಿ ಮಕ್ಕಳನ್ನು ಹೆರುವ ವಿಚಾರದಲ್ಲಿ ಮುಸ್ಲಿಂ ಮಹಿಳೆಯರು ಮುಂದಿರುತ್ತಾರಂತೆ.

ಅನೇಕ ವರ್ಷಗಳ ಹಿಂದೆ ಬೇರೆ ಧರ್ಮಕ್ಕೆ ಹೋಲಿಸಿದ್ರೆ ಕ್ರಿಶ್ಚಿಯನ್ ಧರ್ಮದ ಮಹಿಳೆಯರು ಅತಿ ಹೆಚ್ಚು ಮಕ್ಕಳನ್ನು ಹೆರುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. 2035 ರವರೆಗೆ ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವುದರಲ್ಲಿ ಮುಂದಿರಲಿದ್ದಾರೆಂದು ಸಂಶೋಧನೆ ಹೇಳಿದೆ.

ವಿಶ್ವದ ಎಲ್ಲ ದೇಶಗಳಿಗೆ ಹೋಲಿಕೆ ಮಾಡಿದ್ರೆ ಇಲ್ಲಿಯವರೆಗೆ ಅತಿ ಹೆಚ್ಚು ಕ್ರಿಶ್ಚಿಯನ್ ಧರ್ಮದವರು ಸಾವನ್ನಪ್ಪಿದ್ದಾರೆ. ಇದು ಮುಂದಿನ ವರ್ಷಗಳಲ್ಲಿ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಹಾಗೆ ಕ್ರಿಶ್ಚಿಯನ್ ಧರ್ಮದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಹೋಲಿಕೆ ಮಾಡಿದ್ರೆ ಮುಸ್ಲಿಂ ಧರ್ಮದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಜನನ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸಂಶೋಧನೆ ಹೇಳಿದೆ.

ಬುಧವಾರ ಸಂಶೋಧನಾ ವರದಿ ಬಿಡುಗಡೆಯಾಗಿದೆ. 2030-2035 ರವರೆಗೆ ಮುಸ್ಲಿಂ ಧರ್ಮದಲ್ಲಿ 22.5 ಕೋಟಿ ಮಕ್ಕಳು ಜನಿಸಲಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ 22.4 ಕೋಟಿ ಮಕ್ಕಳು ಜನಿಸಲಿದ್ದಾರೆಂದು ವರದಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...