alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಣದ ಪ್ರತಿಮೆಯಾಗಲಿದ್ದಾರೆ ಬಾಬಾ ರಾಮ್ದೇವ್

ಲಂಡನ್ ನ ಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಮೇಣದ ಪ್ರತಿಮೆ ರಾರಾಜಿಸಲಿದೆ. ಈ ವಸ್ತುಸಂಗ್ರಹಾಲಯದಲ್ಲಿ ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯಿದೆ. ಸ್ವಾಮಿ ವಿವೇಕಾನಂದರ ಬಳಿಕ ಟುಸ್ಸಾಡ್ಸ್ ನಲ್ಲಿ ಸ್ಥಾನ ಪಡೆಯುತ್ತಿರುವ ಎರಡನೇ ಸಂತರಾಗಲಿದ್ದಾರೆ ಬಾಬಾ ರಾಮ್ದೇವ್.

ಸದ್ಯ ಲಂಡನ್ ನಲ್ಲಿರುವ ಬಾಬಾ ರಾಮ್ದೇವ್ ಮೈಕಟ್ಟಿನ ಅಳತೆಯನ್ನು ತೆಗೆದುಕೊಳ್ಳಲಾಗಿದೆ. ವೃಕ್ಷಾಸನದಲ್ಲಿ ಬಾಬಾ ರಾಮ್ದೇವ್ ಮೇಣದ ಪ್ರತಿಮೆ ಸಿದ್ಧವಾಗಲಿದೆ. ಪ್ರತಿಮೆಗಾಗಿ ಬಾಬಾ ರಾಮ್ದೇವ್ ಅವರ 200 ಕ್ಕೂ ಹೆಚ್ಚು ಫೋಟೋಗಳನ್ನು ಪಡೆಯಲಾಗಿದೆ.

ಯಾವುದೆ ಕೊರತೆ ಕಾಣದಂತೆ ಸುಂದರ ಮೇಣದ ಪ್ರತಿಮೆ ನಿರ್ಮಾಣವಾಗಲಿದೆ. ಇದಕ್ಕಾಗಿ ವಸ್ತು ಸಂಗ್ರಹಾಲಯದ 20 ತಜ್ಞರ ತಂಡ ಕೆಲಸ ಮಾಡ್ತಿದೆ. ಮೇಣದ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಯೋಗಗುರು ಇದ್ರಿಂದ ವಿಶ್ವದ ಮೂಲೆ ಮೂಲೆಯಿಂದ ಬರುವ ಜನರಿಗೆ ಯೋಗದ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...