alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಬಾಹುಬಲಿಯೇ ವಿನ್ನರ್…!

ಬಾಹುಬಲಿ ಹವಾ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಈ ವಿಡಿಯೋ. ಫ್ಲೋರಿಡಾದ ಒರ್ಲೆಂಡೋನಲ್ಲಿರೋ ಶಾಲಾ ಮಕ್ಕಳು ಬಾಹುಬಲಿ ನೃತ್ಯದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ನ್ಯಾಶನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ನ ಪಂದ್ಯವೊಂದರಲ್ಲಿ ವಿದ್ಯಾರ್ಥಿನಿಯರ ಬಾಹುಬಲಿ ಝಲಕ್ ನೋಡಿ ಪ್ರೇಕ್ಷಕರು ಬೆರಗಾಗಿದ್ದಾರೆ.

ಸಾಹೋರೆ ಬಾಹುಬಲಿ ಹಾಡಿಗೆ ವಿದ್ಯಾರ್ಥಿನಿಯರು ಮಾಡಿರೋ ಡಾನ್ಸ್ ಇಂಟರ್ನೆಟ್ ನಲ್ಲೂ ವೈರಲ್ ಆಗಿದೆ. ಎನ್ ಬಿ ಎ ಇಂಡಿಯಾ ಈ ವಿಡಿಯೋವನ್ನು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ. ಹಳದಿ ಬಣ್ಣದ ಲೆಹಂಗಾ, ಕಣ್ಣು ಕೋರೈಸುವಂತಹ ಚೋಲಿ ತೊಟ್ಟು ವಿದ್ಯಾರ್ಥಿನಿಯರು ಅದ್ಭುತವಾಗಿ ನರ್ತಿಸಿದ್ದಾರೆ.

7,35,000ಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 790ಕ್ಕೂ ಹೆಚ್ಚು ಜನರು ಇದನ್ನು ಶೇರ್ ಕೂಡ ಮಾಡಿದ್ದಾರೆ. ಸುಮಾರು ಒಂದೂವರೆ ನಿಮಿಷದ ಈ ವಿಡಿಯೋ ಇಂಟರ್ನೆಟ್ ನಲ್ಲಿ ಹಿಟ್ ಆಗಿದೆ. ಫ್ಲೋರಿಡಾದಲ್ಲೂ ದೇಸಿ ವೈಬ್ಸ್ ಗೆ ಎಲ್ರೂ ತಲೆದೂಗಿದ್ದು ವಿಶೇಷ.

Bollywood Heritage Night at Orlando

Orlando gets treated to some CRAZY DESI VIBES! 🙏🏼💃🏻💃🏻

Posted by NBA on Tuesday, November 21, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...