alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಆಟಗಾರನ ರನೌಟ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ…!

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ನಡೆದಿರುವ ಘಟನೆಯೊಂದು ಈಗ ಕ್ರಿಕೆಟ್ ಪ್ರಿಯರಿಂದ ಹಾಸ್ಯಕ್ಕೊಳಗಾಗಿದೆ.

64 ರನ್ ಗಳಿಸಿದ್ದ ಪಾಕಿಸ್ತಾನದ ಅಜರ್ ಆಲಿ, ಹಾಸ್ಯಾಸ್ಪದ ರೀತಿಯಲ್ಲಿ ರನೌಟ್ ಆಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಗೆಬಗೆಯ ಕಮೆಂಟ್ ಗಳಿಗೆ ಒಳಗಾಗಿದೆ.

ಅಷ್ಟಕ್ಕೂ ನಡೆದಿದ್ದೇನೆಂದರೆ, ಅತ್ಯುತ್ತಮ ರೀತಿಯಲ್ಲಿ ಆಟವಾಡುತ್ತಿದ್ದ ಅಜರ್ ಆಲಿ, ಪೀಟರ್ ಸಿಡಲ್ ಬೌಲಿಂಗ್ ನಲ್ಲಿ ಚೆಂಡನ್ನು ಬೌಂಡರಿ ಕಡೆಗೆ ಅಟ್ಟಿದ್ದರು. ಆದರೆ ಚೆಂಡನ್ನು ಸ್ಲಿಪ್ ನಲ್ಲಿದ್ದ ಥರ್ಡ್ ಮ್ಯಾನ್ ತಡೆಯಲು ಯತ್ನಿಸಿದ್ದು, ಇದರಿಂದಾಗಿ ಚೆಂಡಿನ ವೇಗ ಕಡಿಮೆಯಾಯಿತು.

ಆದರೆ ಚೆಂಡು ಬೌಂಡರಿ ಗೆ ಹೋಗಿದೆ ಎಂದು ಭಾವಿಸಿದ ಅಜರ್ ಅಲಿ ಆರಾಮವಾಗಿ ತೆರಳಿ ಮತ್ತೊಬ್ಬ ಆಟಗಾರ ಅಶಾದ್ ಶಫೀಕ್ ಜೊತೆ ಫೀಲ್ಡ್ ಮಧ್ಯೆ ಮಾತನಾಡುತ್ತಾ ನಿಂತರು. ಚೆಂಡು ಬೌಂಡರಿ ಗೆರೆಗಿಂತ ಹಿಂದೆ ನಿಂತಿದ್ದು, ಓಡಿ ಬಂದ ಫೀಲ್ಡರ್ ಮಿಷೆಲ್ ಸ್ಟಾರ್ಕ್ ವಿಕೆಟ್ ಕೀಪರ್ ಕಡೆ ಚೆಂಡು ಎಸೆದರು. ಇದರಿಂದಾಗಿ ಅಜರ್ ಅಲಿ ಸುಖಾಸುಮ್ಮನೆ ಔಟ್ ಆಗುವಂತಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...