alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 3 ಬಾರಿ ಬಣ್ಣ ಬದಲಾಯಿಸುತ್ತೆ ಈ ಬೆಟ್ಟ

ayers rockಊಸರವಳ್ಳಿ ಬಣ್ಣ ಬದಲಾಯಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೆಟ್ಟ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತದೆ. ಈ ಬೆಟ್ಟದ ಹೆಸರು ‘ಆಯೆರ್ಸ್ ರಾಕ್’. ಇದಿರುವುದು ದಕ್ಷಿಣ ಆಸ್ಟ್ರೇಲಿಯಾದಲ್ಲಿ.

ಬೆಳಿಗ್ಗೆ ಸೂರ್ಯ ಹುಟ್ಟುವಾಗ ಈ ಬೆಟ್ಟದ ಮೇಲೆ ಸೂರ್ಯರಶ್ಮಿ ಬೀಳುತ್ತದೆ. ಆಗ ಇಡೀ ಬೆಟ್ಟ ಬೆಂಕಿ ಹತ್ತಿಕೊಂಡು ಉರಿದ ಹಾಗೆ ಭಾಸವಾಗುತ್ತದೆ. ಇದೇ ರೀತಿ ಸೂರ್ಯ ಮುಳುಗುವಾಗಲೂ ಬೂದು ಬಣ್ಣದ ಛಾಯೆಗಳು ಮೂಡುತ್ತವೆ. ಬೆಳಗ್ಗೆಯಿಂದ ಸಂಜೆಯವರೆಗೆ ಈ ಬೆಟ್ಟ ಹಳದಿಯಿಂದ ಕಿತ್ತಳೆ ಬಣ್ಣಕ್ಕೆ, ಕಿತ್ತಳೆ ಬಣ್ಣದಿಂದ ಕೆಂಪು ಬಣ್ಣಕ್ಕೆ ಮತ್ತು ಒಮ್ಮೊಮ್ಮೆ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ.

ಈ ಬೆಟ್ಟ ಹೀಗೆ ಬಣ್ಣ ಬದಲಾಯಿಸಲು ಕಾರಣ, ಇದರಲ್ಲಿರುವ ಮರಳುಗಲ್ಲಿನ ಬಂಡೆ. ಇದಕ್ಕೆ ಕಾಂಗ್ಲೊಮಿರೇಟ್ (Conglomerate) ಎನ್ನುತ್ತಾರೆ. ಸೂರ್ಯ ಹುಟ್ಟುವಾಗ ಮತ್ತು ಮುಳುಗುವಾಗ ಸೂರ್ಯನ ಕಿರಣದಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣಗಳೇ ಹೆಚ್ಚಾಗಿರುತ್ತವೆ. ಏಕೆಂದರೆ ಇತರ ಬಣ್ಣಗಳನ್ನು, ವಾತಾವರಣದಲ್ಲಿನ ಧೂಳಿನ ಕಣಗಳು ಎಲ್ಲೆಡೆ ಹರಡಿಬಿಡುತ್ತವೆ

ಈ ಬೆಟ್ಟವನ್ನು 1873ರಲ್ಲಿ ಇಂಗ್ಲೀಷ್ ಯಾತ್ರಿಕ ಡಬ್ಲು. ಜಿ. ಗೊಸ್ಸೆ ಪತ್ತೆ ಮಾಡಿದ. ಆಗ ಹೆನ್ರಿ ಆಯರ್ಸ್ ದಕ್ಷಿಣ ಆಸ್ಟ್ರೇಲಿಯಾದ ಪ್ರಧಾನಮಂತ್ರಿಯಾಗಿದ್ದರು. ಈ ಕಾರಣಕ್ಕಾಗಿ ಈ ಬೆಟ್ಟಕ್ಕೆ ಅವರ ಹೆಸರನ್ನಿಡಲಾಯಿತು. ಆಸ್ಟ್ರೇಲಿಯಾ ಸರ್ಕಾರ, ಈ ಬೆಟ್ಟದ ಬಳಿ 489 ಚದರ್ ಮೈಲಿ ವಿಸ್ತೀರ್ಣದ ಪ್ರದೇಶದಲ್ಲಿ ಮೌಂಟ್ ಓಲ್ಗ್ ನ್ಯಾಶನಲ್ ಪಾರ್ಕ್ ಸ್ಥಾಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...