alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ವೆಯಲ್ಲಿ ಸಲಿಂಗಕಾಮಿ ಮದುವೆಗೆ ಯಸ್ ಎಂದ ಆಸ್ಟ್ರೇಲಿಯಾ

ಸಲಿಂಗಕಾಮಿ ಮದುವೆಗೆ ಕಾನೂನು ಮಾನ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರ್ವೆ ನಡೆಸಲಾಗಿದೆ. ಈ ಸರ್ವೆಯಲ್ಲಿ ಸಲಿಂಗಕಾಮಿ ವಿವಾಹದ ಪರವಾಗಿ ಹೆಚ್ಚಿನ ಮತ ಬಿದ್ದಿದೆ. ಈ ಸರ್ವೆಯಲ್ಲಿ ಸಲಿಂಗಕಾಮಿ ಮದುವೆಗೆ ಕಾನೂನಿನ ನೆರವು ಸಿಕ್ಕಿಲ್ಲ. ಆದ್ರೆ ಸಂಸತ್ತಿನಲ್ಲಿ ಈ ಮದುವೆ ಬಗ್ಗೆ ಚರ್ಚಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಈ ಸರ್ವೆಯಲ್ಲಿ ದೇಶದ ಶೇಕಡಾ 79.5 ರಷ್ಟು ಮಂದಿ ಪಾಲ್ಗೊಂಡಿದ್ದರು. ಇದ್ರಲ್ಲಿ ಶೇಕಡಾ 61.6ರಷ್ಟು ಮಂದಿ ಸಲಿಂಗಕಾಮಿ ಮದುವೆ ಪರ ಮತದಾನ ಮಾಡಿದ್ರು. ಶೇಕಡಾ 38.4ರಷ್ಟು ಮಂದಿ ಮಾತ್ರ ಸಲಿಂಗಕಾಮಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸಲಿಂಗಕಾಮಿ ಮದುವೆ ಬಗ್ಗೆ ಸರ್ಕಾರ ಎಂಟು ವಾರಗಳ ಕಾಲ ಪೋಸ್ಟಲ್ ಸರ್ವೆ ನಡೆಸಿತ್ತು. ಈ ಸರ್ವೆಯಲ್ಲಿ ಪಾಲ್ಗೊಳ್ಳಲು ಯಾವುದೇ ನಿರ್ಬಂಧವಿರಲಿಲ್ಲ. ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಈ ಸರ್ವೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಜನರು ಸಲಿಂಗಕಾಮಿ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರಿಸ್ಮಸ್ ವೇಳೆಗೆ ಸಲಿಂಗಕಾಮಿ ಮದುವೆಗೆ ಸಂಬಂಧಿಸಿದಂತೆ ಕಾನೂನು ರಚಿಸುವುದಾಗಿ ಭರವಸೆ ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...