alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಇಟ್ಕೊಂಡು ಮಲಗಿ ಕೈಸುಟ್ಟುಕೊಂಡ ಮಹಿಳೆ

burn

ಚಾರ್ಜಿಂಗ್ ಗೆ ಹಾಕಿದ್ದ ಐಫೋನ್ ಇಟ್ಟುಕೊಂಡೇ ಆಕಸ್ಮಿಕವಾಗಿ ನಿದ್ದೆ ಹೋಗಿದ್ದ ಆಸ್ಟ್ರೇಲಿಯಾದ ಮಹಿಳೆಯ ಕೈ ಸುಟ್ಟು ಹೋಗಿದೆ. ಮೆಲಾನಿ ತನ್ ಪೆಲೇಜ್ ಎಂಬಾಕೆ ಸುಟ್ಟು ಹೋಗಿರುವ ತನ್ನ ಕೈ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾಳೆ. ಮಲಗುವ ಸಮಯದಲ್ಲಿ ಮೊಬೈಲ್ ಗಳನ್ನು ದೂರದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾಳೆ.

ಇತ್ತೀಚೆಗಷ್ಟೆ ಮೆಲಾನಿ ಐಫೋನ್ – 7 ಖರೀದಿಸಿದ್ಲು. ಮೊಬೈಲ್ ಚಾರ್ಜ್ ಗೆ ಹಾಕಿದ್ದ ಈಕೆ ಸಿನಿಮಾ ನೋಡುತ್ತಿದ್ಲು, ಹಾಗೆಯೇ ನಿದ್ದೆ ಹೋಗಿದ್ದಾಳೆ. ಆ ಸಮಯದಲ್ಲಿ ಮೊಬೈಲ್ ಅವಳ ಕೈಮೇಲಿತ್ತು. ಇದ್ದಕ್ಕಿದ್ದಂತೆ ಕೈಗಳಲ್ಲಿ ನೋವು, ಉರಿ ಶುರುವಾಗಿದ್ದರಿಂದ ಮೆಲಾನಿಗೆ ನಿದ್ದೆಯಿಂದ ಎಚ್ಚರವಾಗಿದೆ. ಎದ್ದು ನೋಡುವಷ್ಟರಲ್ಲಿ ಅವಳ ಕೈ ಸಂಪೂರ್ಣ ಸುಟ್ಟು ಹೋಗಿತ್ತು.

ಬಹಳ ವರ್ಷಗಳಿಂದ ಐಫೋನ್ ಬಳಸುತ್ತಿದ್ದು, ಇದುವರೆಗೂ ಇಂತಹ ಭಯಾನಕ ಅನುಭವವಾಗಿರಲಿಲ್ಲ ಅಂತಾ ಮೆಲಾನಿ ಹೇಳಿದ್ದಾಳೆ. ಸುಟ್ಟ ಗಾಯ ನೋಡಿದ ಮೆಲಾನಿಗೆ ಮೊದಲು ಯಾವುದರಿಂದ ಈ ರೀತಿ ಆಗಿದೆ ಅನ್ನೋದು ಗೊತ್ತಾಗಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಸರಿಯಾಗಿ ಪರೀಕ್ಷಿಸಿದಾಗ ಸುಟ್ಟ ಗುರುತು ಚಾರ್ಜಿಂಗ್ ವೈರ್ ಮತ್ತು ಮೊಬೈಲ್ ಆಕಾರದಲ್ಲಿದ್ದಿದ್ದು ಗೋಚರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...