alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಗೆ ಬಂದವಳ ಮೇಲೆರೆಗಿದ ಗೊರಿಲ್ಲಾ, ಏನಾಯ್ತು ಗೊತ್ತಾ..?

gorilla

ಕಿಗಾಲಿ: ನವದಂಪತಿಗೆ ಹನಿಮೂನ್ ಎಂದರೆ ಏನೋ ಒಂಥರಾ. ಇಂತಹ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಏಕಾಂತದಲ್ಲಿ ಕಾಲ ಕಳೆಯುವುದು ಸಾಮಾನ್ಯ. ಹೀಗೆ ಹನಿಮೂನ್ ಗೆ ಹೋದ ನವಜೋಡಿಯ ಅನುಭವಿಸಿದ ತೊಂದರೆ ಕುರಿತ ವರದಿ ಇಲ್ಲಿದೆ.

ಆಸ್ಟ್ರೇಲಿಯಾದ ನವದಂಪತಿ ಹೊಸ ಜೀವನದ ರಸಮಯ ಕ್ಷಣ ಕಳೆಯಲು ಹನಿಮೂನ್ ಗೆಂದು ಆಫ್ರಿಕಾ ಖಂಡಕ್ಕೆ ಬಂದಿದ್ದಾರೆ. ಪೂರ್ವ ಆಫ್ರಿಕಾದ ರಾಂಡ್ವಾಕ್ಕೆ ಬಂದಿದ್ದ ನವಜೋಡಿ ಅಲ್ಲಿನ ಪ್ರಸಿದ್ಧ ಗೊರಿಲ್ಲಾ ಪಾರ್ಕ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನವ ವಿವಾಹಿತೆ ಮೇಲೆ ಗೊರಿಲ್ಲಾ ಎರಗಿದೆ. ಅಲ್ಲಿದ್ದ ಗೊರಿಲ್ಲಾಗಳನ್ನು ನೋಡುತ್ತಾ ಫೋಟೋ ತೆಗೆಯುವ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಗೊರಿಲ್ಲಾ, ಆಕೆಯನ್ನು ಬೀಳಿಸಿ ಪರಾರಿಯಾಗಿದೆ. ಆಸ್ಟ್ರೇಲಿಯಾದ ಕೋಸ್ ಗ್ರಿಫ್ ಹಾಗೂ ಡೇಮಿಯನ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು.

ಅವರು ರಾಂಡ್ವಾದ ದಟ್ಟಾರಣ್ಯದಲ್ಲಿ ಗೊರಿಲ್ಲಾ ಪಾರ್ಕ್ ನಲ್ಲಿ ಫೋಟೋ ತೆಗೆಯುವಾಗ, ಏಕಾಏಕಿ ಸಮೀಪಕ್ಕೆ ಬಂದ ಗೊರಿಲ್ಲಾ ಕೋಸ್ ಗ್ರಿಫ್ ಳನ್ನು ನೂಕಿದ್ದು, ಆಕೆಗೆ ಪೆಟ್ಟಾಗಿದೆ. ಆಕೆ ತೊಟ್ಟಿದ್ದ ಬಟ್ಟೆಯ ಬಣ್ಣ ನೋಡಿ ಗೊರಿಲ್ಲಾ ಪ್ರಚೋದನೆಗೆ ಒಳಗಾಗಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...