alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟ್ರಾಬೆರಿಗೆ ಸೂಜಿ ಚುಚ್ಚಿ ಸಿಕ್ಕಿ ಬಿದ್ಲು ಮಹಿಳೆ…!

ಆಸ್ಟ್ರೇಲಿಯಾದ ಆಹಾರ ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿರುವ ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚುವ ಮೂಲಕ ಕಲಬೆರಕೆಗೊಳಿಸುವ ಪ್ರಕರಣದ ಸಂಬಂಧ ಪೊಲೀಸರೀಗ 50 ವರ್ಷದ ಮಹಿಳೆಯೊಬ್ಬರ ಮೇಲೆ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.

160 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೌಲ್ಯದ (116 ಮಿಲಿಯನ್ ಅಮೆರಿಕನ್ ಡಾಲರ್) ಆಸ್ಟ್ರೇಲಿಯಾದ ಸ್ಟ್ರಾಬೆರಿ ಉದ್ಯಮಕ್ಕೇ ಕಪ್ಪು ಚುಕ್ಕೆ ತಂದಿತ್ತು ಈ ಸೂಜಿ ಕಲಬೆರಕೆ ಪ್ರಕರಣ. ಸ್ಟ್ರಾಬೆರಿ ಹಣ್ಣುಗಳಿಗೆ ಸೂಜಿ ಚುಚ್ಚಿರುವ ಕುರಿತು ಸುಮಾರು 200 ರಷ್ಟು ದೂರುಗಳು ಬಂದಿದ್ದವು. ದೈತ್ಯ ಸೂಪರ್‌ ಮಾರ್ಕೆಟ್‌ ಗಳು ಹಣ್ಣುಗಳನ್ನು ವಾಪಸ್ ಮಾಡಿದ್ದವು. ಈ ಪ್ರಕರಣದಿಂದಾಗಿ ಹಣ್ಣುಗಳಿಗೆ ಬೇಡಿಕೆಯಿಲ್ಲದೆ ಕೆಲವು ಬೆಳೆಗಾರರು ತಿಪ್ಪೆಗೆ ಸುರಿಯಬೇಕಾಗಿ ಬಂದಿತ್ತು.

ಈ ಕಲಬೆರಕೆ ಪ್ರಕರಣದ ಸಂಬಂಧ ಇದೀಗ ಮೊದಲ ಬಾರಿಗೆ ಆರೋಪಪಟ್ಟಿ ದಾಖಲಾಗುತ್ತಿದ್ದು, ಈ ಮಹಿಳೆಯ ಮೇಲೆ 7 ಕೇಸ್‌ಗಳು ದಾಖಲಾಗಿವೆ. ಈ ಮಹಿಳೆ ಕಲಬೆರಕೆ ಆರೋಪಕ್ಕೆ ತುತ್ತಾದ ಸ್ಟ್ರಾಬೆರಿ ಬ್ರಾಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯಾಗಿದ್ದಾಳೆ. ಈಕೆಯ ಮೇಲಿನ ಆರೋಪ ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ಎದುರಿಸಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...