alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ನಲ್ಲೇ ಸ್ತನ್ಯಪಾನ ಮಾಡಿಸಿದ ಸಂಸದೆ

as_1494419215_749x421

ಮಂಗಳವಾರ ಆಸ್ಟ್ರೇಲಿಯಾ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಕ್ವೀನ್ಸ್ಲ್ಯಾಂಡ್ ನಗರದ ಸೆನೆಟರ್ ಲಾರಿಸ್ಸಾ ವಾಟರ್ಸ್ 2 ತಿಂಗಳ ಮಗುವಿಗೆ ಸಂಸತ್ ಕಲಾಪದಲ್ಲಿ ಸ್ತನ್ಯಪಾನ ಮಾಡಿಸಿ ಇತಿಹಾಸ ಬರೆದಿದ್ದಾರೆ. ಈ ಅಭೂತಪೂರ್ವ ಕ್ಷಣದ ಫೋಟೋವನ್ನು ಸೆನೆಟರ್ ಟ್ವೀಟರ್ ಗೆ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

ಇದು ಹೆಮ್ಮೆಯ ವಿಷಯ. ನನ್ನ ಮಗಳು ಆಲಿಯಾ ಸಂಸತ್ ನಲ್ಲಿ ಸ್ತನ್ಯಪಾನ ಮಾಡಿದ ಮೊದಲ ಮಗು. ನಮ್ಮ ಸಂಸತ್ ಗೆ ಮತ್ತಷ್ಟು ಮಹಿಳೆಯರು, ತಂದೆ-ತಾಯಂದಿರ ಅಗತ್ಯವಿದೆ ಎಂದು ಸೆನೆಟರ್ ಟ್ವಿಟ್ ಮಾಡಿದ್ದಾರೆ. ಹೆರಿಗೆ ರಜೆ ಮುಗಿಸಿ ಮಂಗಳವಾರ ಸಂಸತ್ ಕಲಾಪಕ್ಕೆ ಹಾಜರಾಗಿದ್ದಾರೆ ಸೆನೆಟರಿ. ಆಲಿಯಾ ಎರಡನೇ ಮಗಳು.

ಆಸ್ಟ್ರೇಲಿಯಾ ಸಂಸತ್ ನಿಯಮಗಳ ಬದಲಾವಣೆಯಲ್ಲಿ ಸೆನೆಟರ್ ಮಹತ್ವದ ಪಾತ್ರ ವಹಿಸಿದ್ದರು. ಹಿಂದಿನ ವರ್ಷ ಹೋರಾಟದಲ್ಲಿ ಯಶಸ್ವಿಯಾಗಿದ್ದರು. ಮಹಿಳೆಯರಿಗೆ ಸಂಸತ್ ನಲ್ಲಿ ಮಕ್ಕಳ ಆರೈಕೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು ಸೆನೆಟರ್. ಇದಕ್ಕೂ ಮೊದಲು ಮಕ್ಕಳು ಪಾರ್ಲಿಮೆಂಟ್ ಒಳಗೆ ಪ್ರವೇಶ ಮಾಡುವಂತಿರಲಿಲ್ಲ.

ಸೆನೆಟರ್ ಟ್ವೀಟರ್ ಗೆ ಅಪಾರ ಪ್ರಮಾಣದಲ್ಲಿ ಪ್ರತಿಕ್ರಿಯೆ ಬರ್ತಾ ಇದೆ. 1500ಕ್ಕೂ ಹೆಚ್ಚು ಬಾರಿ ರೀ ಟ್ವಿಟ್ ಮಾಡಲಾಗಿದೆ. 4400ಕ್ಕೂ ಹೆಚ್ಚು ಜನರು ಟ್ವೀಟರ್ ಲೈಕ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...