alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಆಸ್ಟ್ರೇಲಿಯಾ ಮಾಧ್ಯಮಗಳ ಉದ್ಧಟತನ

kohli-fox-sports-post

ಬೆಂಗಳೂರು ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ಅವರ ವರ್ತನೆ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಆಕ್ಷೇಪ ಎತ್ತಿದ್ದವು. ಇದೀಗ ‘ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ’ ಮತ್ತೊಂದು ಉದ್ಧಟತನ ತೋರಿದೆ. ವಿರಾಟ್ ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದೆ.

‘ವೆಟ್ಟಲ್ ಆಫ್ ದಿ ವೀಕ್’ ಗೆ ವೋಟ್ ಮಾಡಿ ಅಂತಾ ಬರೆದಿರೋ ‘ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ’, ಕೊಹ್ಲಿ, ಪಾಂಡಾ, ನಾಯಿಮರಿ ಹಾಗೂ ಬೆಕ್ಕಿನ ಮರಿಯ ಫೋಟೋವನ್ನು ಹಾಕಿದೆ. ಕ್ರೀಡೆಯ ವಿಲನ್ ಎಂಬರ್ಥದಲ್ಲಿ ವೆಟ್ಟಲ್ ಎಂಬ ಪದವನ್ನು ಬಳಸಲಾಗಿದೆ.  ಕೊಹ್ಲಿಯನ್ನು ನಾಯಿ, ಬೆಕ್ಕು ಮತ್ತು ಪಾಂಡಾ ಜೊತೆಗೆ ಹೋಲಿಕೆ ಮಾಡಿದೆ.

‘ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ’ದ ಈ ಕೃತ್ಯ ನಿಜಕ್ಕೂ ನಾಚಿಕೆಗೇಡು ಅಂತಾ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೊಂದು ಜನಾಂಗೀಯ ನಿಂದನೆ ಅಂತಾ ಕಮೆಂಟ್ ಮಾಡಿದ್ದಾರೆ. ನಿನ್ನೆಯಷ್ಟೆ ಆಸ್ಟ್ರೇಲಿಯಾದ ‘ಡೇಲಿ ಟೆಲಿಗ್ರಾಫ್’ ಪತ್ರಿಕೆ ವಿರಾಟ್ ಹಾಗೂ ಕುಂಬ್ಳೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿತ್ತು. ಕೊಹ್ಲಿ ಎನರ್ಜಿ ಡ್ರಿಂಕ್ ಬಾಟಲಿಯನ್ನು ಆಸ್ಟ್ರೇಲಿಯಾ ಅಧಿಕಾರಿ ಕಡೆಗೆ ಎಸೆದಿದ್ದಾರೆ, ಕುಂಬ್ಳೆ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಮ್ಯಾಚ್ ಅಫಿಶಿಯಲ್ ಬಾಕ್ಸ್ ಗೆ ನುಗ್ಗಿದ್ದರು ಅಂತೆಲ್ಲಾ ಬರೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...