alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲೊಂದು ವಿಸ್ಮಯ, ಮೊಟ್ಟೆಯೊಳಗೊಂದು ಮೊಟ್ಟೆ…!

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ರೈತನೊಬ್ಬ ಪ್ರಕೃತಿ ವೈಚಿತ್ರ್ಯ ನೋಡಿ ಬೆರಗಾಗಿದ್ದಾನೆ. ಕೇರ್ನ್ಸ್ ನಲ್ಲಿರೋ ಸ್ಟಾಕ್ ಮ್ಯಾನ್ಸ್ ಎಗ್ ನಲ್ಲಿ ಆತ ಮೊಟ್ಟೆ ಸಂಗ್ರಹಿಸಲು ತೆರಳಿದ್ದ. ಅಲ್ಲಿ ಒಂದು ಮೊಟ್ಟೆ ಬೃಹದಾಕಾರದಲ್ಲಿತ್ತು. ಸಾಮಾನ್ಯ ಮೊಟ್ಟೆಗಿಂತ ಮೂರು ಪಟ್ಟು ದೊಡ್ಡದಾಗಿತ್ತು.

ಅದನ್ನು ಒಡೆದು ನೋಡಿದಾಗ ಮತ್ತೊಂದು ಅಚ್ಚರಿ ಕಾದಿತ್ತು. ಯಾಕಂದ್ರೆ ಮೊಟ್ಟೆಯೊಳಗೆ ಮತ್ತೊಂದು ಮೊಟ್ಟೆ ಪತ್ತೆಯಾಗಿದೆ. ಇದನ್ನು ಫೇಸ್ಬುಕ್ ನಲ್ಲಿ ಆತ ಪೋಸ್ಟ್ ಮಾಡಿದ್ದಾನೆ. ಸಾಮಾನ್ಯವಾಗಿ ಮೊಟ್ಟೆ 58 ಗ್ರಾಂ ತೂಕವಿರುತ್ತದೆ. ಆದ್ರೆ ಈ ಮೊಟ್ಟೆ 176 ಗ್ರಾಂ ತೂಕವಿತ್ತು.

1923ರಿಂದ್ಲೂ ಈ ಫಾರ್ಮ್ ಅಸ್ತಿತ್ವದಲ್ಲಿದೆ. ಇಷ್ಟು ದೊಡ್ಡ ಮೊಟ್ಟೆ ಸಿಕ್ಕಿರೋದು ಇದೇ ಮೊದಲು. ತಜ್ಞರು ಕೂಡ ಮೊಟ್ಟೆಯೊಳಗೊಂದು ಮೊಟ್ಟೆ ನೋಡಿ ಅಚ್ಚರಿಪಟ್ಟಿದ್ದಾರೆ. ಕೋಳಿ ಬಹಳ ಒತ್ತಡದಲ್ಲಿದ್ರೆ ಈ ರೀತಿ ಆಗುತ್ತದೆ ಅನ್ನೋದು ಅವರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...