alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನೇ ಕತ್ತರಿಸಿ ಬಾಣಲೆಯಲ್ಲಿ ಹುರಿದ ಬಾಣಸಿಗ

chef

ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ವಿಲಕ್ಷಣ ಘಟನೆ ಇದು. ಬಾಣಸಿಗನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಬಾಣಲೆಯಲ್ಲಿ ಹುರಿದು ಬಿಟ್ಟಿದ್ದಾನೆ. ಕೊಲೆಯಾದ ಮಹಿಳೆ ಇಂಡೋನೇಷ್ಯಾ ಮೂಲದವಳು, ಟ್ರಾನ್ಸ್ ಜೆಂಡರ್ ಆಗಿದ್ಲು.

ಬ್ರಿಸ್ಬೇನ್ ನ ಮನೆಯಲ್ಲೇ ಬಾಣಸಿಗ ಮಾರ್ಕಸ್ ವೋಲ್ಕ್ ಎಂಬಾತ ಪತ್ನಿ ಮಯಾಂಗ್ ಪ್ರಸ್ಟೆಯೋಳನ್ನು ಕೊಂದು ಹಾಕಿದ್ದಾನೆ. ಆತನ ಮನೆಯಿಂದ ಒಂದು ರೀತಿಯ ಸುಟ್ಟ ವಾಸನೆ ಬರ್ತಾ ಇತ್ತು. ಆ ವಾಸನೆಯನ್ನು ತಡೆಯಲಾಗದೆ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಪೊಲೀಸರು ಬರ್ತಿದ್ದಂತೆ ಬೆದರಿದ ಮಾರ್ಕಸ್, ನಾಯಿಯನ್ನು ಕಟ್ಟಿಹಾಕಿ ಬರೋದಾಗಿ ಸುಳ್ಳು ಹೇಳಿ ಅಲ್ಲಿಂದ ಓಡಿ ಹೋಗಿದ್ದ. ಕೈಗಾರಿಕಾ ಪ್ರದೇಶವೊಂದರಲ್ಲಿ ಅಡಗಿಕೊಂಡಿದ್ದ ಮಾರ್ಕಸ್, ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆ ಮಾರ್ಕಸ್ ಹಾಗೂ ಮಯಾಂಗ್ ಭೇಟಿಯಾಗಿದ್ರು. ಮಾರ್ಕಸ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...