alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ನಲ್ಲೇ ಬಂದೆರಗಿತ್ತು ಸಾವು

ಬ್ರಿಸ್ಬೇನ್: ಜಿಮ್ ನಲ್ಲಿ ಕಸರತ್ತು ಮಾಡುವಾಗಲೇ ಅವಘಡ ಸಂಭವಿಸಿ, 15 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಬೆನ್ ಶಾ ಮೃತಪಟ್ಟ ಬಾಲಕ. ಬ್ರಿಸ್ಬೇನ್ ನಲ್ಲಿರುವ ಜಿಮ್ ನಲ್ಲಿ 100 ಕೆ. ಜಿ. ತೂಕದ ಉಪಕರಣ ಅವರ ಮೇಲೆ ಬಿದ್ದಿದೆ. ಭಾರವನ್ನು ಎತ್ತುವಾಗ ಶಾ ಹಿಡಿತ ಕಳೆದುಕೊಂಡಿದ್ದು, ಅವರ ಮೇಲೆ ಉಪಕರಣ ಬಿದ್ದಿದೆ. ಇದರಿಂದಾಗಿ ಅಸ್ವಸ್ಥಗೊಂಡಿದ್ದ ಶಾನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬೆನ್ ಶಾ ಕುಟುಂಬದವರು ಆತನ ಅಂಗಾಂಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.

ನಿಯಮಾನುಸಾರ ಕಿರಿಯವರು ಜಿಮ್ ನಲ್ಲಿ ತರಬೇತಿ ಪಡೆಯುವಾಗ, ಮೇಲ್ವಿಚಾರಕರು ಸ್ಥಳದಲ್ಲಿರಬೇಕಿತ್ತು. ಆದರೆ, ನಿರ್ಲಕ್ಷ್ಯದ ಕಾರಣ ಶಾ ಸಾವನ್ನಪ್ಪಿದ್ದು, ಆತನ ಸಾವಿನ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...