alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲಿದ್ದ ಭಾರತದ ವಿದ್ಯಾರ್ಥಿಗೆ ಡೇಟಿಂಗ್ ಸೈಟ್ ಮುಳುವಾಯ್ತು

ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿ ಹತ್ಯೆ ಪ್ರಕರಣದಲ್ಲಿ ಹುಡುಗಿಯೊಬ್ಬಳನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. 26 ವರ್ಷದ ಮೌಲಿನ್ ರಾಥೋಡ್  ನನ್ನು 18 ವರ್ಷದ ಲಿ ಡೋಲ್ಹೊಗಿ ಹತ್ಯೆಗೈದಿದ್ದಾಳೆ. ಸೋಮವಾರವೇ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಸನ್ಬರಿಯ ರೋಸ್ ಕೋರ್ಟ್ ನಲ್ಲಿರುವ ಮನೆಯಲ್ಲಿ ಕಳೆದ ಸೋಮವಾರ ಡೋಲ್ಹೊಗಿ, ಮೌಲಿನ್ ರಾಥೋಡ್ ಮೇಲೆ ಹಲ್ಲೆ ನಡೆಸಿದ್ದಳು. ಡೋಲ್ಹೊಗಿ ಮರುದಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ವಿಡಿಯೋ ಕಾಲಿಂಗ್ ಮೂಲಕ ಮೆಲ್ಬೋರ್ನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಆರೋಪಿ ವಿಚಾರಣೆ ನಡೆಯಿತು.

ಮೌಲಿನ್ ಹಾಗೂ ಡೋಲ್ಹೊಗಿ ಡೇಟಿಂಗ್ ವೆಬ್ ಸೈಟ್ ಒಂದರ ಮೂಲಕ ಪರಿಚಿತರಾಗಿದ್ದರು. ಇಬ್ಬರೂ ಭೇಟಿ ಮಾಡಲು ನಿರ್ಧರಿಸಿದ್ದರು. ಡೋಲ್ಹೊಗಿ ಭೇಟಿ ಮಾಡಿ ವಾಪಸ್ ಹೋಗುವ ವೇಳೆ ಮೌಲಿನ್ ಮೇಲೆ ದಾಳಿ ನಡೆದಿತ್ತು. ಮೌಲಿನ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಮಂಗಳವಾರ ಮೌಲಿನ್ ಸಾವನ್ನಪ್ಪಿದ್ದ.

ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಬಂಧಿಸಿದ್ದರು. ಈಗ ಹತ್ಯೆ ಪ್ರಕರಣ ದಾಖಲಾಗಿದೆ. ನವೆಂಬರ್ 19ರಂದು ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ರಾಥೋಡ್  ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದಿದ್ದ. ಚೆನ್ನಾಗಿ ವಿದ್ಯಾಭ್ಯಾಸ ಮಾಡ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ರಾಥೋಡ್ ಪಾಲಕರು ದುಃಖದಲ್ಲಿದ್ದಾರೆ. ರಾಥೋಡ್ ಮೃತ ದೇಹವನ್ನು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...