alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷಗಳ ಬಳಿಕ ಕೊನೆಗೂ ಸೆರೆಯಾಯ್ತು ದೈತ್ಯ ಮೊಸಳೆ

ಎಂಟು ವರ್ಷದಿಂದ ವನ್ಯಜೀವಿ ಅಧಿಕಾರಿಗಳಿಗೆ ಸತಾಯಿಸುತ್ತಿದ್ದ, 60 ವರ್ಷದ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸೆರೆ ಸಿಕ್ಕ ಮೊಸಳೆ, ಸುಮಾರು 600 ಕೆ.ಜಿ ತೂಕದ್ದಾಗಿದ್ದು, 4.7 ಮೀಟರ್ ಉದ್ದವಾಗಿದೆ. ಈ ಮೊಸಳೆ ಕ್ಯಾಥರೀನ್ ನದಿಯಲ್ಲಿ 2010 ರಿಂದ ಚಳ್ಳೆಹಣ್ಣು ತಿನ್ನಿಸುತ್ತಿತ್ತು. ಕೊನೆಗೆ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ವನ್ಯಜೀವಿ ಇಲಾಖೆ ಸಫಲವಾಗಿದೆ.

‘ನಾವು ಮೊಸಳೆ ಹಿಡಿಯಲು ಬಹು ವರ್ಷಗಳಿಂದ ಪ್ರಯತ್ನ ನಡೆಸಿದ್ದೆವು. ಮೊಸಳೆ ನಮಗೆ ವಂಚಿಸುತ್ತಿತ್ತು. ದೈತ್ಯ ಆಕಾರ ಆಗಿದ್ದರಿಂದ ಹಿಡಿಯಲು ತೊಂದರೆ ಉಂಟಾಯಿತು. ಈ ಕಾರ್ಯಾಚರಣೆ ರೋಮಾಂಚಕಾರಿಯಾಗಿತ್ತು’ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...