alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಸ್ ಹೂಸು ಬಿಟ್ಟಿದ್ದಕ್ಕೆ ಕೇಸ್ ಜಡಿದ ಉದ್ಯೋಗಿ

ಆಸ್ಟ್ರೇಲಿಯಾದಲ್ಲಿ ನಡೆದ ವಿಚಿತ್ರ ಪ್ರಕರಣ ಇದು. ವ್ಯಕ್ತಿಯೊಬ್ಬ 1.8 ಮಿಲಿಯನ್ ಡಾಲರ್ ಪರಿಹಾರ ಕೇಳಿ ತನ್ನ ಮಾಜಿ ಬಾಸ್ ವಿರುದ್ಧ ಕೇಸ್ ದಾಖಲಿಸಿದ್ದ. ಅಷ್ಟಕ್ಕೂ ಆತನ ಮಾಜಿ ಬಾಸ್ ಮಾಡಿದ ತಪ್ಪೇನು ಗೊತ್ತಾ?

ಆತ ಯಾವಾಗ್ಲೂ ಮುಖ ತಿರುಗಿಸಿಕೊಂಡು ಇವನಿಗೆ ತಾಕುವಂತೆ ಹೂಸು ಬಿಡುತ್ತಿದ್ದನಂತೆ. ಇದರಿಂದ ತಾನು ಖಿನ್ನತೆಗೆ ಒಳಗಾಗಿದ್ದೇನೆ. ಅಧಿಕ ಒತ್ತಡ ಅನುಭವಿಸಿದ್ದೇನೆ ಅಂತಾ ಡೇವಿಡ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಒಂದು ವರ್ಷ ಬಾಸ್ ಬಿಡುತ್ತಿದ್ದ ಹೂಸಿನಿಂದ ನರಕಯಾತನೆ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾನೆ.

18 ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೀತು. ವಿಚಾರಣೆ ವೇಳೆ ಮಾತನಾಡಿದ ಡೇವಿಡ್ ನ ಮಾಜಿ ಬಾಸ್, ಒಂದೆರಡು ಬಾರಿ ಹೂಸು ಬಿಟ್ಟಿದ್ದೇನೆ ಅಷ್ಟೆ, ಆತನಿಗೆ ತೊಂದರೆ ಮಾಡಿಲ್ಲ ಅಂತಾ ಹೇಳಿದ್ದಾನೆ. ಆದ್ರೆ ಒಮ್ಮೆ ಡೇವಿಡ್ ತನ್ನ ಬಾಸ್ ಗೆ ಡಿಯೋಡ್ರಂಟ್ ಸ್ಪ್ರೇ ಮಾಡಲು ಯತ್ನಿಸಿದ್ದನಂತೆ.

ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಅನ್ನೋದು ಸಹೋದ್ಯೋಗಿಗಳ ಆರೋಪ. ಯಾಕಂದ್ರೆ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂಡು ಡೇವಿಡ್ ಈ ರೀತಿ ಮಾಜಿ ಬಾಸ್ ವಿರುದ್ಧ ಕೇಸ್ ದಾಖಲು ಮಾಡಿದ್ದಾನಂತೆ. ಅದೇನೇ ಆದ್ರೂ ಕೋರ್ಟ್ ಈ ಪ್ರಕರಣವನ್ನೇ ವಜಾ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...