alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿತನ ದೂರ ಮಾಡುತ್ತೆ ಈ ಗೋಲ್ಡ್ ಫಿಶ್

ಬೆಲ್ಜಿಯಂನ ಹೋಟೆಲ್ ಒಂದ್ರಲ್ಲಿ ಕೊಡ್ತಿರೋ ವಿಶಿಷ್ಟ ಆಫರ್ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದೆ. ಬ್ರುಸೆಲ್ಸ್ ನಲ್ಲಿರೋ ಹೋಟೆಲ್ ಚಾರ್ಲೆರೊಯ್ ನಲ್ಲಿ ಏಕಾಂಗಿ ಗ್ರಾಹಕರಿಗೆ ಒಂದು ರಾತ್ರಿ ಮೀನನ್ನು ಬಾಡಿಗೆಗೆ ಕೊಡಲಾಗುತ್ತದೆ.

ಈ ಮೀನು ಅವರ ಒಂಟಿತನವನ್ನು ದೂರ ಮಾಡುತ್ತದೆ. ಮಿಚೆಲ್ ಕೂಕೆ ಎಂಬಾಕೆ ಈ ಬಗ್ಗೆ ಟ್ವೀಟ್ ಮಾಡಿದ್ದಾಳೆ. ಈ ಟ್ವೀಟ್ ಗೆ 34,500 ರಿಟ್ವೀಟ್ಸ್ ಬಂದಿದ್ದು, 13,000 ಬಾರಿ ರಿಟ್ವೀಟ್ ಮಾಡಲಾಗಿದೆ. ಹಲವು ವರ್ಷಗಳಿಂದ ಹೋಟೆಲ್ ಚಾರ್ಲೆರೊಯ್ ನಲ್ಲಿ ಈ ಆಫರ್ ಇದೆಯಂತೆ.

ಅಷ್ಟೇ ಅಲ್ಲ ಗ್ರಾಹಕರಿಗೆ ಇದು ಇಷ್ಟವಾಗಿದೆ ಎನ್ನುತ್ತಾರೆ ಮ್ಯಾನೇಜರ್. ಗ್ರಾಹಕರಿಗೆ ಅಚ್ಚರಿಯ ಜೊತೆಗೆ ಮೀನಿನ ಜೊತೆಗೆ ಕಾಲಕಳೆಯುವುದು ಖುಷಿ ಕೊಡ್ತಿದೆಯಂತೆ. ಪ್ರತಿ ವಾರ ಬೇರೆ ಬೇರೆ ಫಿಶ್ ಅನ್ನು ಬಾಡಿಗೆಗೆ ತಂದು ಅದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಗೋಲ್ಡ್ ಫಿಶ್ ಗಳನ್ನೇ ಜನರು ಇಷ್ಟಪಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...