alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ ಬಾಲ್ ನೋಡುವಾಗಲೇ ಬಂದೆರಗಿತ್ತು ಸಾವು

foot-ball-ll

ಜುಬಾ: ಫುಟ್ ಬಾಲ್ ನೋಡಲು ಬಂದಿದ್ದ ಅಭಿಮಾನಿಗಳು, ದಾರುಣವಾಗಿ ಸಾವು ಕಂಡ ಘಟನೆ ದಕ್ಷಿಣ ಸುಡಾನ್ ನಲ್ಲಿ ನಡೆದಿದೆ.

ದಕ್ಷಿಣ ಸೂಡಾನ್ ನ ಜುಬಾ ಪ್ರಾಂತ್ಯದಲ್ಲಿ ಫುಟ್ ಬಾಲ್ ವೀಕ್ಷಿಸುತ್ತಿದ್ದ ಅಭಿಮಾನಿಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಬಾರ್ ಒಂದರಲ್ಲಿ ಇಂಗ್ಲೀಷ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿಗೆ ಪಂದ್ಯ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಅವರೆಲ್ಲ ಖುಷಿಯಿಂದ ಪಂದ್ಯ ವೀಕ್ಷಿಸುವಾಗಲೇ ಅಪರಿಚಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ಇದರಿಂದಾಗಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೂಡಾನ್ ಮಾಹಿತಿ ಇಲಾಖೆ ಸಹಾಯಕ ಸಚಿವ ಪೌಲ್ ಅಕೊಲ್ ಕೊರ್ದಿತ್ ಈ ಕುರಿತು ಮಾಹಿತಿ ನೀಡಿದ್ದು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...