alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿ ದೋಚಲು ಬಂದ ಕಳ್ಳ ಕೇಳಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಕಳ್ಳ ಅಂಗಡಿಗೆ ನುಗ್ಗಿದ್ರೆ, ಹಣ ನೀಡುವಂತೆ ಅಂಗಡಿಯ ಮಾಲೀಕರಿಗೆ ಬೆದರಿಕೆ ಹಾಕುವುದನ್ನು ನೋಡಿದ್ದೇವೆ. ಆದ್ರೆ, ಅಮೆರಿಕದ ಫ್ಲೋರಿಡಾದಲ್ಲಿನ ಕ್ರಿಸ್ಪಿ ಕ್ರೀಮ್ ಅಂಗಡಿಯಲ್ಲಿ ಕಳ್ಳ ಹಣದ ಜೊತೆಗೆ ಕೇಳಿದ ವಸ್ತು ಮಾಲೀಕರನ್ನು ಚಕಿತಗೊಳಿಸಿದೆ. ಹಾಗಿದ್ರೆ ಆ ಕಳ್ಳ ಕೇಳಿದ್ದಾದ್ರೂ ಏನು ಎಂಬ ಕುತೂಹಲನಾ? ಹಾಗಿದ್ರೆ ಮುಂದೆ ಓದಿ.

ಅಂಗಡಿ ದೋಚುವ ಪ್ಲಾನ್ ನಿಂದ 45 ವರ್ಷದ ಸಿವಾಟು, ಮಧ್ಯಾಹ್ನ ಅಂಗಡಿ ಪ್ರವೇಶಿಸಿದ್ದಾನೆ. ತಾನು ಅಂಗಡಿಗೆ ಬಂದ ಉದ್ದೇಶವನ್ನು ಕಳ್ಳ ಸಿಬ್ಬಂದಿಗೆ ಹೇಳಿದ್ದಾನೆ. ಅಲ್ಲದೆ ತನಗೆ 10 ರಿಂದ 20 ಡಾಲರ್ ಹಣ ಹಾಗೂ ಡೋನಟ್ಸ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದ್ರಿಂದ ಚಕಿತರಾದ ಸಿಬ್ಬಂದಿ ಇನ್ನೋರ್ವ ಸಿಬ್ಬಂದಿಯ ಸಹಾಯ ಪಡೆದಿದ್ದಾರೆ. ಆಗಲೂ ಕಳ್ಳ ಮೊದಲಿನಂತೆ ಹೇಳಿದ್ದಾನೆ.

ಪ್ರಕರಣದ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ವಿಚಾರಣೆ ವೇಳೆ ಕಳ್ಳ ಸಿಬ್ಬಂದಿಗೆ ತಿಳಿಸಿದಂತೆ 10 ರಿಂದ 20 ಡಾಲರ್ ಹಣ ಹಾಗೂ ಡೋನಟ್ಸ್ ನೀಡುವಂತೆ ಕೇಳಿಕೊಂಡಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಕೃಷ್ಣನ ಜನ್ಮ ಸ್ಥಳಕ್ಕೆ ಕಳಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಾಕಿಕೊಂಡಿದ್ದು ವೈರಲ್ ಆಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...