alex Certify
ಕನ್ನಡ ದುನಿಯಾ       Mobile App
       

Kannada Duniya

4ನೇ ವರ್ಷದಲ್ಲಿಯೇ ಬಾಲಕಿಗೆ ಶುರುವಾಯ್ತು ಮುಟ್ಟಿನ ಪ್ರಕ್ರಿಯೆ

ಐದು ವರ್ಷದ ಬಾಲಕಿಯೊಬ್ಬಳು ತನ್ನ ನಾಲ್ಕನೇ ವರ್ಷದಲ್ಲಿಯೇ ಋತುಮತಿಯಾಗಿದ್ದಾಳೆ. ಇದೊಂದು ವಿಚಿತ್ರ ಖಾಯಿಲೆಯಾಗಿದ್ದು, ಇದನ್ನು ಎಡಿಸನ್ ಎಂದು ಕರೆಯುತ್ತಾರೆ.

ಎಮಿಲಿ ಡೋವರ್ ಜನನ ಸಾಮಾನ್ಯ ರೀತಿಯಲ್ಲಿಯೇ ಆಗಿತ್ತು. ಹುಟ್ಟಿದಾಗ ಎಮಿಲಿ ಸಂಪೂರ್ಣ ಆರೋಗ್ಯವಾಗಿದ್ದಳು. ಆದ್ರೆ ಹುಟ್ಟಿದ ಎರಡು ವಾರದಲ್ಲಿಯೇ ಆಕೆ ದೇಹದಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿದೆ. ನಾಲ್ಕು ತಿಂಗಳಲ್ಲಿಯೇ ಆಕೆ ಒಂದು ವರ್ಷದ ಮಗುವಿನಂತೆ ಕಾಣಿಸಲು ಶುರುವಾಗಿದ್ದಾಳೆ.

ಎಮಿಲಿಗೆ ಎರಡು ವರ್ಷವಾಗ್ತಿದ್ದಂತೆ ಹದಿಹರೆಯದ ಹುಡುಗಿಯರಲ್ಲಾಗುವ ಬದಲಾವಣೆಗಳು ಆಕೆಯಲ್ಲಿ ಕಾಣಿಸಿಕೊಳ್ಳಲು ಆರಂಭವಾಗಿದೆ. ನಾಲ್ಕು ವರ್ಷದಲ್ಲಿ ಮುಟ್ಟಿನ ಪ್ರಕ್ರಿಯೆ ಶುರುವಾಗಿದೆ. ತಾನು ಉಳಿದ ಮಕ್ಕಳಿಗಿಂತ ಭಿನ್ನವಾಗಿದ್ದೇನೆ ಎಂಬುದು ಎಮಿಲಿ ಚಿಂತೆಗೆ ಕಾರಣವಾಗಿದೆ. ಆದ್ರೆ ಯಾಕೆ ಈ ಸಮಸ್ಯೆಯಾಗ್ತಿದೆ ಎಂಬುದು ಎಮಿಲಿಗೆ ತಿಳಿದಿಲ್ಲ ಎನ್ನುತ್ತಾರೆ ಆಕೆ ತಾಯಿ.

ಎಡಿಸನ್ ಜೊತೆ ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಎಮಿಲಿಗೆ ಚಿಕಿತ್ಸೆ ನಡೆಯುತ್ತಿದೆ. ಪ್ರತಿವಾರ ಫಿಜಿಯೋಥೆರಫಿ ಮಾಡಲಾಗ್ತಿದೆ. ಈಗ ಎಮಿಲಿಗೆ ಐದು ವರ್ಷ. ಚಿಕಿತ್ಸೆಯಿಂದ ಎಮಿಲಿ ಆರೋಗ್ಯದಲ್ಲಿ ಸುಧಾರಣೆಯಾಗ್ತಿದೆ. ಆದ್ರೆ ಅಡ್ಡಪರಿಣಾಮ ಎದುರಿಸಬೇಕಾಗಿದೆ. 50 ವರ್ಷ ವಯಸ್ಸಿನ ಮಹಿಳೆಯರು ಎದುರಿಸುವ ಸಮಸ್ಯೆ ಎಮಿಲಿಗೆ ಕಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...