alex Certify
ಕನ್ನಡ ದುನಿಯಾ       Mobile App
       

Kannada Duniya

ಈಡೇರಿದೆ 105 ವರ್ಷದ ವೃದ್ಧೆಯ ಕೊನೆಯಾಸೆ

diplome

ಪೆನ್ಸಿಲ್ವೇನಿಯಾದ ಮಹಿಳೆ ಥೆರೆಸಿಯಾ ಬ್ರಾಂಡಲ್ ಗೆ ಈಗ 105 ವರ್ಷ ವಯಸ್ಸು. ಹೈಸ್ಕೂಲ್ ಶಿಕ್ಷಣ ಪೂರೈಸಲು ಸಾಧ್ಯವಾಗಿಲ್ಲ ಅನ್ನೋ ಕೊರಗು ಅವಳನ್ನು ಈಗಲೂ ಕಾಡುತ್ತಿತ್ತು. ಹಾಗಾಗಿ ಥೆರೆಸಿಯಾಗೆ ಗೌರವ ಡಿಪ್ಲೊಮಾ ಪದವಿ ನೀಡಲಾಗಿದೆ. ಅಮೆರಿಕದ ಓಕ್ ಡೇಲ್ ನಲ್ಲಿರುವ ನರ್ಸಿಂಗ್ ಹೋಮ್ ನಲ್ಲಿ ಥೆರೆಸಿಯಾ ಡಿಪ್ಲೊಮಾ ಪಡೆದಿದ್ದಕ್ಕೆ ಸಂಭ್ರಮಾಚರಣೆ ಕೂಡ ನಡೀತು.

ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಕುಟುಂಬದ ಸದಸ್ಯೆರೆಲ್ಲ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ರು. ಥೆರೆಸಿಯಾ ಬ್ರಾಂಡಲ್, ಆಗಿನ್ನೂ ಹೈಸ್ಕೂಲ್ ಗೆ ಪ್ರವೇಶ ಪಡೆದಿದ್ಲು. ಸ್ಟೋವ್ ಹೈಸ್ಕೂಲ್ ನಲ್ಲಿ ಓದ್ತಾ ಇದ್ಲು. ಆದ್ರೆ ಆಕೆಯ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅರ್ಧದಲ್ಲೇ ಶಾಲೆ ಬಿಡಬೇಕಾಯ್ತು.

ಥೆರೆಸಿಯಾ ಓದಿದ್ದ ಆ ಶಾಲೆ ನಂತರ ಸ್ಟೊರೊಕ್ಸ್ ಹೈಸ್ಕೂಲ್ ಜೊತೆಗೆ ವಿಲೀನಗೊಂಡಿತ್ತು. ಸ್ಟೊರೊಕ್ಸ್ ಸ್ಕೂಲ್ ಇದೀಗ ಥೆರೆಸಿಯಾಗೆ ಗೌರವ ಡಿಪ್ಲೊಮಾ ನೀಡಿದೆ. ಟ್ವಿಲೈಟ್ ವಿಶ್ ಫೌಂಡೇಶನ್ ನವರು ಆಯೋಜಿಸಿದ್ದ ಕಾರ್ಯಕ್ರಮ ಇದು. 65 ಮಂದಿಯ ಕೊನೆಯಾಸೆಯನ್ನು ಪೂರೈಸಲು ಸಂಸ್ಥೆ ಕಾರ್ಮಕ್ರಮ ಹಮ್ಮಿಕೊಂಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...