alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ 59 ಲಕ್ಷದ ವಜ್ರ ಕದ್ದು ಭಾರತದಲ್ಲಿ ಸಿಕ್ಕಿಬಿದ್ದ ದಂಪತಿ

ದುಬೈನ ವಜ್ರದಂಗಡಿಯಿಂದ ಸುಮಾರು 81,000 ಅಮೆರಿಕನ್ ಡಾಲರ್ ಮೌಲ್ಯದ ವಜ್ರ ಕಳ್ಳತನವಾಗಿದೆ. ನಾಟಕೀಯ ರೀತಿಯಲ್ಲಿ ಭಾರತದ ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸರು ದಂಪತಿಯನ್ನು ದುಬೈಗೆ ವಾಪಸ್ ಕಳುಹಿಸಿದ್ದಾರೆ. ಮಹಿಳೆ 3.27 ಕ್ಯಾರೆಟ್ ವಜ್ರವನ್ನು ಕದ್ದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ವಜ್ರ ಕದ್ದು ದುಬೈನಿಂದ ಮುಂಬೈಗೆ ಬಂದಿದ್ದ ದಂಪತಿ ಹಾಂಕಾಂಗ್ ವಿಮಾನ ಏರುವಾಗ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ದಂಪತಿ ಕಳ್ಳತನ ಮಾಡಿದ್ದ ಸಿಸಿ ಟಿವಿ ದೃಶ್ಯಗಳನ್ನು ಬಹಿರಂಗಪಡಿಸಿದ್ದಾರೆ. ದಂಪತಿ ವಜ್ರದಂಗಡಿಗೆ ಪ್ರವೇಶ ಮಾಡ್ತಾರೆ. ಪತಿ ವಜ್ರದ ಬೆಲೆ ಕೇಳ್ತಿದ್ದರೆ ಪತ್ನಿ ಜಾಕೆಟ್ ಗೆ ವಜ್ರ ಹಾಕಿದ್ದಾಳೆ.

ಇಬ್ಬರೂ ವಜ್ರ ಕದ್ದು ಅಂಗಡಿಯಿಂದ ಹೊರ ಬಂದಿದ್ದಾರೆ. ವಜ್ರ ಕಳ್ಳತನವಾಗಿ ಮೂರು ಗಂಟೆ ನಂತ್ರ ಮಾಲೀಕನಿಗೆ ವಜ್ರ ಕಳ್ಳತನವಾಗಿರುವುದು ಗೊತ್ತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...