alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾಕಪ್: ಹೈವೋಲ್ಟೆಜ್ ಪಂದ್ಯದತ್ತ ಎಲ್ಲರ ಚಿತ್ತ

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಹೈವೋಲ್ಟೆಜ್ ಪಂದ್ಯ ನಡೆಯಲಿದೆ.  ಕ್ರಿಕೆಟ್ ನ ಬದ್ಧ ವೈರಿಗಳ ಕಾದಾಟವನ್ನು ನೋಡಲು ವಿಶ್ವ ತುದಿಗಾಲಿನಲ್ಲಿ ನಿಂತಿದೆ. ಒಂದು ವರ್ಷದ ಬಳಿಕ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಅಖಾಡದಲ್ಲಿ ಕಾದಾಟ ನಡೆಸಲಿವೆ.

ಇಂಡೋ ಪಾಕ್ ತಂಡಗಳು ಈಗಾಗಲೇ 129 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಾಕಿಸ್ತಾನ 73 ರಲ್ಲಿ ಜಯ ಸಾಧಿಸಿದ್ರೆ, ಭಾರತ 52 ರಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ ಭಾರತ 6 ರಲ್ಲಿ ಗೆಲುವಿನ ಮಾಲೆ ಧರಿಸಿದೆ.

ನಿನ್ನೆಯ ಪಂದ್ಯದಲ್ಲಿ ಶತಕ ಸಾಧನೆ ಮಾಡಿರುವ ಶಿಖರ್ ಧವನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು ರೋಹಿತ್ ಶರ್ಮಾ ರನ್ ಕಲೆ ಹಾಕುವ ಅನಿವಾರ್ಯತೆ ಇದೆ. ಅನುಭವಿ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ರನ್ನು ಕಣಕ್ಕೆ ಇಳಿಸಲು ಟೀಮ್ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ. ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೆಂಚ್ ಕಾಯ್ದಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಇನ್ನು ಕೇದಾರ್ ಜಾದವ್, ಧೋನಿ ಸಮಯೋಚಿತ ಬ್ಯಾಟಿಂಗ್ ನಡೆಸಿದ್ರೆ, ದೊಡ್ಡ ಮೊತ್ತ ಫಿಕ್ಸ್.

ಬೌಲಿಂಗ್ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಕಂಡ ವೈಫಲ್ಯಗಳನ್ನು ಮೆಟ್ಟಿ ನಿಂತಲ್ಲಿ ಮಾತ್ರ ಟೀಮ್ ಇಂಡಿಯಾ ಇಂದು ಗೆಲುವು ಸಾಧಿಸಬಹುದು. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಶಿಸ್ತುಬದ್ಧ ದಾಳಿಯಿಂದ ಪಾಕ್ ಬ್ಯಾಟ್ಸ್ ಮನ್ ರನ್ನು ಕಾಡಲಿದ್ದಾರೆ. ಭುವನೇಶ್ವರ್ ಕುಮಾರ್ ಸ್ವಿಂಗ್ ನಡೆದ್ರೆ, ಎದುರಾಳಿಗಳಿಗೆ ಕಂಟಕ ಗ್ಯಾರಂಟಿ. ಸ್ಪಿನ್ ವಿಭಾಗವನ್ನ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಮುನ್ನಡೆಸಲಿದ್ದಾರೆ.

ಪಾಕಿಸ್ತಾನ ತಂಡ ಹಾಂಕಾಂಗ್ ವಿರುದ್ಧ ಜಯ ದಾಖಲಿಸಿ ಬೀಗುತ್ತಿದ್ದು, ಗುಂಪಿನಲ್ಲಿ ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಪಾಕ್ ಪರ ಉಸ್ಮಾನ್ ಖಾನ್, ಹಸನ್ ಅಲಿ, ಶಹಬಾದ್ ಖಾನ್ ಲಯಬದ್ಧ ದಾಳಿ ನಡೆಸುವ ಭರವಸೆ ಮೂಡಿಸಿದ್ದಾರೆ. ಇನ್ನು ಸ್ಟಾರ್ ಬ್ಯಾಟ್ಸ್ ಮನ್ ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...