alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲದ ಬಲೆಯಿಂದ ಹೊರ ಬರಲು ಕಾರುಗಳನ್ನ ಹರಾಜಿಗಿಟ್ಟ ಪಾಕ್ ಸರ್ಕಾರ

ಪಾಕಿಸ್ತಾನದ ಸಾಲ ಏರುತ್ತಿರುವ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸೋಕೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪರದಾಡ್ತಿದೆ. ಈ ಸಂಬಂಧ ಕಳೆದ ತಿಂಗಳು 61 ಕಾರುಗಳ ಹರಾಜು ಪ್ರಕ್ರಿಯೆಯ ಮೂಲಕ ಮೊದಲ ಹಂತದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಪಾಕಿಸ್ತಾನ ಸರ್ಕಾರ ಪ್ರಯತ್ನ ನಡೆಸಿತ್ತು.

ಈಗ ಮತ್ತೆ ಪಾಕಿಸ್ತಾನ ಅದೇ ಹಾದಿಯನ್ನ ಹಿಡಿದಿದೆ. ಎರಡನೇ ಹಂತದಲ್ಲೂ ಪಾಕಿಸ್ತಾನ ಸರ್ಕಾರ ತನ್ನ ದುಬಾರಿ ಕಾರುಗಳನ್ನ ಮಾರಾಟಕ್ಕಿಟ್ಟಿದೆ. ಹರಾಜು ಪ್ರಕ್ರಿಯೆಯ ಮೂಲಕ ಸಾರ್ವಜನಿಕರು ಈ ಕಾರುಗಳನ್ನು ಕೊಂಡುಕೊಂಡಿದ್ದಾರೆ.

ಅಕ್ಟೋಬರ್ 17ರಂದು ನಡೆದ ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 49ಕ್ಕೂ ಹೆಚ್ಚು ಕಾರುಗಳನ್ನ ಮಾರಾಟ ಮಾಡಲಾಗಿದೆ. ಇದರಲ್ಲಿ 19 ಬುಲೆಟ್ ಪ್ರೂಫ್ ಕಾರುಗಳು ಸೇರಿವೆ. ಸರ್ಕಾರದ ಅಧೀನದಲ್ಲಿರುವ ಕಾರುಗಳ ಪೈಕಿ ಒಟ್ಟು 102 ಕಾರುಗಳನ್ನ ಹರಾಜು ಹಾಕೋಕೆ ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ ಹರಾಜು ಹಾಕಲಾದ ಮೂರು ಎಸ್ಯುವಿ ಲ್ಯಾಂಡ್ ಕ್ರೂಸರ್ ಕಾರುಗಳಿಂದ ಪಾಕಿಸ್ತಾನ ಸರ್ಕಾರಕ್ಕೆ ಕ್ರಮವಾಗಿ 27.4 ಮಿಲಿಯನ್, 26.5 ಮಿಲಿಯನ್, 26.1 ಮಿಲಿಯನ್ ಸಂಗ್ರಹವಾಗಿದೆ. ಅಷ್ಟೇ ಅಲ್ಲ ನವಾಜ್ ಷರೀಫ್ ಅವಧಿಯಲ್ಲಿ ಪಾಕಿಸ್ತಾನದ ಪ್ರಧಾನಿ ನಿವಾಸದಲ್ಲಿದ್ದ ಎಂಟು ಎಮ್ಮೆ ಮತ್ತು ಮೂರು ಒಂಟೆಗಳನ್ನ ಕೂಡ ಹರಾಜು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...