alex Certify
ಕನ್ನಡ ದುನಿಯಾ       Mobile App
       

Kannada Duniya

ಆಶ್ಚರ್ಯಕರ ಕಾರಣಕ್ಕೆ ಬಾಯ್ ಫ್ರೆಂಡ್ ಬಾಡಿಗೆ ಪಡೀತಾರೆ ಹುಡುಗಿಯರು

21ನೇ ಶತಮಾನದಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಮಹಿಳೆಯರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದಕ್ಕೆ ಚೀನಾ ಕೂಡ ಹೊರತಾಗಿಲ್ಲ. ಸಾಮಾನ್ಯವಾಗಿ ಚೀನಾದಲ್ಲಿ 20 ವರ್ಷದೊಳಗೆ ಎಲ್ಲರೂ ಮದುವೆ ಬಂಧನಕ್ಕೊಳಗಾಗ್ತಾರೆ. 20 ದಾಟಿದ್ರೂ ಮದುವೆಯಾಗದ ಹುಡುಗಿಯರಿಗೆ ಶೊಗ್ ನು ಎಂದು ಕರೆಯುತ್ತಾರೆ. ಅಂದ್ರೆ ನಿರಾಕರಿಸಿದ ಮಹಿಳೆಯರು ಎಂದರ್ಥ.

ಸಮಾಜದಲ್ಲಿ ಹಾಗೂ ಕುಟುಂಬಸ್ಥರ ಮುಂದೆ ಶೊಗ್ ನು ಎನ್ನಿಸಿಕೊಳ್ಳಲು ಹುಡುಗಿಯರು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ನೆರೆ ಚೀನಾದಲ್ಲಿ ಬಾಡಿಗೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಉದ್ಯಮಕ್ಕೆ ವೇಗ ಸಿಗ್ತಿದೆ. ಕುಟುಂಬಸ್ಥರಿಗೆ ಹಾಗೂ ಸಮಾಜಕ್ಕೆ ಮೋಸ ಮಾಡಲು 20 ವರ್ಷ ಮೇಲ್ಪಟ್ಟ ಹುಡುಗ, ಹುಡುಗಿಯರು ಬಾಡಿಗೆ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಮೊರೆ ಹೋಗ್ತಿದ್ದಾರೆ. ಬಾಡಿಗೆ ಬಾಯ್ ಫ್ರೆಂಡ್ ಪಡೆದು ಹುಡುಗಿಯರು ಮನೆಯವರಿಂದ ಸ್ವಾತಂತ್ರ್ಯಬಯಸಿದ್ರೆ ಹುಡುಗ್ರು ಮುಜುಗರ ತಪ್ಪಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ.

ಚೀನಾದಲ್ಲಿ ಬಾಡಿಗೆ ಬಾಯ್ಫ್ರೆಂಡ್, ಗರ್ಲ್ ಫ್ರೆಂಡ್ ವ್ಯವಹಾರ ಆನ್ಲೈನ್ ನಲ್ಲಿಯೂ ನಡೆಯುತ್ತದೆ. ಪ್ರತಿ ದಿನಕ್ಕೆ 10 ಸಾವಿರ ರೂಪಾಯಿ ವಸೂಲಿ ಮಾಡುತ್ತದೆ ಕಂಪನಿ. ಹೊಸ ವರ್ಷದಂದು ಮಕ್ಕಳು ತಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಮದುವೆಯಾಗುವುದಾಗಿ ಘೋಷಣೆ ಮಾಡ್ಲಿ ಎಂದು ಪಾಲಕರು ಬಯಸ್ತಾರೆ. ಆದಷ್ಟು ಬೇಗ ಮಕ್ಕಳ ಮದುವೆಯಾಗಿ ಮನೆ ತುಂಬ ಮಕ್ಕಳಾಗಲಿ ಎಂಬುದು ಅವ್ರ ಬಯಕೆ. ಪಾಲಕರ ಈ ಆಸೆಗಾಗಿ ಮಕ್ಕಳು ಬಾಡಿಗೆ ಬಾಯ್ ಫ್ರೆಂಡ್, ಗರ್ಲ್ಫ್ರೆಂಡ್ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...