alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್: ಉಗ್ರರ ಸದೆ ಬಡಿಯಲು ಕಾರ್ಯಾಚರಣೆ

lond-terro-nm

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಯುನೈಟೆಡ್ ಕಿಂಗ್ ಡಂ ಸಂಸತ್ ಭವನದ ಸಮೀಪದ ವೆಸ್ಟ್ ಮಿನಿಸ್ಟರ್ ಸೇತುವೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರ್ ನುಗ್ಗಿಸಿದ್ದಾರೆ.

ಪಾದಚಾರಿಗಳ ಮೇಲೆ ಕಾರ್ ಹರಿದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಸತ್ ಭವನದ ಒಳಗೂ ಕಾರ್ ನುಗ್ಗಿಸಲು ಮುಂದಾಗಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿ ತಡೆದ ಕಾರಣ ಗುಂಡಿನ ದಾಳಿ ನಡೆಸಿದ್ದಾರೆ. ಎದುರಿಗೆ ಸಿಕ್ಕ ಪೊಲೀಸರನ್ನು ಹರಿತವಾದ ಚಾಕುವಿನಿಂದ ಇರಿದಿದ್ದಾರೆ.

ಉಗ್ರರ ದಾಳಿ ಹಿನ್ನಲೆಯಲ್ಲಿ ಬ್ರಿಟಿಷ್ ಸಂಸತ್ ಕೆಳಮನೆಯಾಗಿರುವ ಹೌಸ್ ಆಫ್ ಕಾಮನ್ಸ್ ಅಧಿವೇಶನವನ್ನು ಸ್ಥಗಿತಗೊಳಿಸಲಾಗಿದೆ.

ಸಂಸತ್ ಭವನದ ಒಳಗೆ ಸಂಸದರು, ಅಧಿಕಾರಿಗಳು ಸೇರಿ 200 ಕ್ಕೂ ಅಧಿಕ ಮಂದಿ ಇದ್ದು, ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

lond-bnmಲಂಡನ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವೆಸ್ಟ್ ಮಿನಿಸ್ಟರ್ ಅರಮನೆ ಬಂದ್ ಮಾಡಲಾಗಿದೆ. ಇದರ ಸಮೀಪದಲ್ಲೇ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.

ಹಲವೆಡೆ ಉಗ್ರರು ಸಂಭಾವ್ಯ ದಾಳಿ ನಡೆಸುವ ಸಾಧ್ಯತೆ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...