alex Certify
ಕನ್ನಡ ದುನಿಯಾ       Mobile App
       

Kannada Duniya

ನೀಲಿ ಟಾಯ್ಲೆಟ್ ಸೀಟ್ ಬಂದಿದ್ದಕ್ಕೆ ಮಹಿಳೆ ಮಾಡಿದ್ದೇನು ಗೊತ್ತಾ?

ಕೆಲವೊಮ್ಮೆ ನಾವು ಬಯಸಿದ್ದು ಆಗದೇ ಹೋದರೆ ಸಿಟ್ಟಿಗೇಳುವುದು, ಕಸಿವಿಸಿಗೊಳ್ಳುವುದು ಸಹಜ. ಈ ಸಮಯದಲ್ಲಿ ನಮ್ಮ ಬುದ್ಧಿ ನಮ್ಮ ಕೈಯ್ಯಲ್ಲಿರೋದಿಲ್ಲ. ಯೋಚನಾಶಕ್ತಿ, ತಾಳ್ಮೆಯೂ ಇರೋದಿಲ್ಲ. ಈ ಘಟನೆಯಲ್ಲಿ ಆಗಿರೋದೂ ಅದೇ.

ಮಹಿಳೆಯೊಬ್ಬಳು ಟಾಯ್ಲೆಟ್ ಸೀಟ್ ಒಂದನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಳು. ಆದ್ರೆ ಬಿಳಿ ಬಣ್ಣದ ಸೀಟ್ ಬದಲಿಗೆ ನೀಲಿ ಬಣ್ಣದ ಸೀಟ್ ಬಂದಿತ್ತು. ಇದರಿಂದ ಆಕೆ ವಿಪರೀತ ಸಿಟ್ಟಿಗೆದ್ದಿದ್ದಳು.

ಆದರೆ ಮಗಳು ಬಂದೊಡನೆ ಆಗಿದ್ದೇ ಬೇರೆ. ಅಸಲಿಗೆ ತಾಯಿ ಸ್ವೀಕರಿಸಿದ ಟಾಯ್ಲೆಟ್ ಸೀಟ್ ಬಿಳಿ ಬಣ್ಣದ್ದೇ ಆಗಿತ್ತು. ಅದರ ಮೇಲಿನ ಕವರ್ ಇದ್ದದ್ದು ಮಾತ್ರ ನೀಲಿ ಬಣ್ಣದ್ದು.  ಧಾವಂತದಲ್ಲಿ ಅದರಲ್ಲಿರೋ ಸೂಚನೆಯನ್ನು ಓದದೇ ಇದ್ದ ತಾಯಿ ಕೋಪ ಮಾಡಿಕೊಂಡಿದ್ದು, ಮಗಳು ಬಂದು ಅದರ ಮೇಲಿರೋ ಪ್ರೊಟೆಕ್ಟಿವ್ ಕವರ್ ತೆಗೆದ ಮೇಲೆಯೇ ಆಕೆಗೆ ಸತ್ಯ ಗೊತ್ತಾಗಿದ್ದು.

ಈ ಸ್ವಾರಸ್ಯಕರ ಘಟನೆಯನ್ನು ಮಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ 1ಲಕ್ಷ 70 ಸಾವಿರ ಲೈಕ್ ಬಂದಿದ್ದು 35 ಸಾವಿರ ಸಲ ರೀಟ್ವೀಟ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...