alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸಿಂ ಅಕ್ರಂ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

wasim

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂಗೆ ಬಂಧನ ಭೀತಿ ಎದುರಾಗಿದೆ. ಗುಂಡು ಹಾರಿಸಿದ ಘಟನೆಗೆ ಸಂಬಂಧಪಟ್ಟಂತೆ ವಾಸಿಂ ಅಕ್ರಂ ಕೇಸ್ ದಾಖಲಿಸಿದ್ರು. ಆದ್ರೆ ಸತತ 31 ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಹಾಗಾಗಿ ಕೋರ್ಟ್ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

2015 ರಲ್ಲಿ ಕರಾಚಿಯ ಕರ್ಸಜ್ ನಲ್ಲಿ ವಾಸಿಂ ಅಕ್ರಂ ಅವರ ಕಾರಿನ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿದ್ದ. ಪೊಲೀಸರ ಜೊತೆ ಸೇರಿ ಶಂಕಿತರ ವಿರುದ್ಧ ಅಕ್ರಂ ಪ್ರಕರಣ ದಾಖಲಿಸಿದ್ದರು. ಆದ್ರೆ ನಂತರ 31 ಬಾರಿ ವಿಚಾರಣೆ ನಡೆದಾಗಲೂ ಅಕ್ರಂ ಕೋರ್ಟ್ ಗೆ ಬಂದಿರಲಿಲ್ಲ. ಹಾಗಾಗಿ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಜನವರಿ 17 ರೊಳಗೆ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ. ಅಮಿರುಲ್ ರೆಹಮಾನ್ ಎಂಬಾತನ ಅಂಗರಕ್ಷಕ ಅಕ್ರಂ ಮೇಲೆ  ಗುಂಡು ಹಾರಿಸಿದ್ದಾನೆ ಎನ್ನಲಾಗ್ತಾ ಇದ್ದು, ಅಮಿರುಲ್ ಕ್ಷಮಾಪಣೆ ಪತ್ರ ಕಳುಹಿಸಿಕೊಟ್ಟಿದ್ದ. ಆದ್ರೆ ಕೂಡಲೇ ಆತನ ಕಾರು ಹಾಗೂ ಬಂದೂಕು ಲೈಸನ್ಸ್ ವಾಪಸ್ ಪಡೆಯುವಂತೆ ವಾಸಿಂ ಅಕ್ರಂ ಒತ್ತಾಯಿಸಿದ್ದರು.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...