alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ನನ್ನು ಬಂಧಿಸಿದರೆ ಹಣವೇನು ಸಿಗಲ್ಲ ಎಂದ ಮಲ್ಯ

mallya.vijayಭಾರತದ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ಅದನ್ನು ತೀರಿಸದೆ ಈಗ ವಿದೇಶಕ್ಕೆ ಪಲಾಯನಗೈದಿರುವ ‘ಮದ್ಯ ದೊರೆ’ ವಿಜಯ್ ಮಲ್ಯ, ಭಾರತ ಸರ್ಕಾರ ತಮ್ಮ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಕ್ರಮಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಲಂಡನ್ ನಿಂದ ಪ್ರಕಟಗೊಳ್ಳುವ ‘ಫೈನಾನ್ಶಿಯಲ್ ಟೈಮ್ಸ್’ ಗೆ ಸಂದರ್ಶನ ನೀಡಿರುವ ಮಲ್ಯ, ಉದ್ಯಮಿಗಳು ಬ್ಯಾಂಕುಗಳಿಂದ ಸಾಲ ಪಡೆಯುವುದು ಸಹಜ. ತಾವು ಹಾಗೆಯೇ ಸಾಲ ಪಡೆದಿದ್ದು, ಈಗ ಆರೋಪಿಸುತ್ತಿರುವಂತೆ ಆ ಹಣವನ್ನು ಇತರೆ ವ್ಯವಹಾರಗಳಿಗೆ ಬಳಸಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಸಾಲ ತೀರಿಸುವ ಸಲುವಾಗಿ ಬ್ಯಾಂಕುಗಳ ಮುಂದೆ ಈಗಾಗಲೇ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದೇನೆ. ಬ್ಯಾಂಕುಗಳು ಈ ಕುರಿತು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಒಂದು ವೇಳೆ ತಮ್ಮನ್ನು ಬಂಧಿಸಿದರೆ ಅವರಿಗೆ ಹಣವೇನು ಸಿಗುವುದಿಲ್ಲ. ಅದರ ಬದಲು ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದಾರೆ. ಅಲ್ಲದೇ ಸದ್ಯಕ್ಕೆ ತಾವು ಬ್ರಿಟನ್ ಬಿಟ್ಟು ಭಾರತಕ್ಕೆ ತೆರಳುವ ಯೋಚನೆ ಹೊಂದಿಲ್ಲವೆಂದು ಹೇಳಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...