alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಹತ್ಯೆಗೆ ಸೇನಾಧಿಕಾರಿಯ ಖತರ್ನಾಕ್ ಪ್ಲಾನ್

ಇಂಗ್ಲೆಂಡ್ ನಲ್ಲಿ ಸೇನಾಧಿಕಾರಿಯೊಬ್ಬ ಪತ್ನಿಯ ಪ್ಯಾರಾಚೂಟ್ ಕತ್ತರಿಸಿ ಆಕೆಯ ಹತ್ಯೆಗೆ ಯತ್ನಿಸಿದ್ದಾನೆ. ಪ್ಯಾರಾಚೂಟ್ ಒಳಗಿನ ಕೆಲವೊಂದು ಭಾಗಗಳನ್ನು ಎಮಿಲಿ ಸಿಲಿಯರ್ಸ್ ಕತ್ತರಿಸಿ ಹಾಕಿದ್ದ. ಆಕೆ ಮೇಲಿಂದ ಕೆಳಕ್ಕೆ ಬಿದ್ದು ಸತ್ತು ಹೋದ್ರೆ ತಾನು ಪ್ರೇಯಸಿಯ ಜೊತೆಗೆ ಇರಬಹುದು ಅನ್ನೋದು ಆತನ ಲೆಕ್ಕಾಚಾರವಾಗಿತ್ತು.

ಈತನ ಪತ್ನಿ ವಿಕ್ಟೋರಿಯಾ ಸಿಲಿಯರ್ಸ್ ಕೂಡ ಸೇನೆಯಲ್ಲಿ ಅಧಿಕಾರಿಯಾಗಿದ್ಲು. ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ಲು. ಎಮಿಲಿ ಮಾಡಿದ ಈ ಕೃತ್ಯದಿಂದಾಗಿ ವಿಕ್ಟೋರಿಯಾ ಪ್ಯಾರಾಚೂಟ್ ನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.

ಎಮಿಲಿಗೆ ಸಾಮಾಜಿಕ ಜಾಲತಾಣದ ಮೂಲಕ ಬೇರೊಬ್ಬಳ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಲಾರಂಭಿಸಿದ್ರು. ಪ್ರೇಯಸಿಗಾಗಿ ಪತ್ನಿಯನ್ನು ಹೇಗಾದ್ರೂ ದೂರ ಮಾಡಬೇಕೆಂದು ಎಮಿಲಿ ಪ್ಲಾನ್ ಮಾಡಿದ್ದ. ಆದ್ರೆ ಕೋರ್ಟ್ ನಲ್ಲಿ ಮಾತ್ರ ಉಲ್ಟಾ ಹೊಡೆದಿದ್ದಾನೆ.

ಆಕೆಗೆ ಜನಿಸಿದ್ದ ಮಕ್ಕಳಿಗೆ ತಾನು ತಂದೆಯಲ್ಲ, ಅವಳಿಗೆ ಬೇರೊಬ್ಬನ ಜೊತೆ ಸಂಬಂಧವಿದೆ ಅಂತೆಲ್ಲಾ ಆರೋಪಿಸಿದ್ದ. 4000 ಅಡಿ ಎತ್ತರದಲ್ಲಿ ವಿಮಾನದಿಂದ ಆಕೆ ಪ್ಯಾರಾಚೂಟ್ ಕಟ್ಟಿಕೊಂಡು ಕೆಳಕ್ಕೆ ಜಿಗಿದಿದ್ದಳು. ಆದ್ರೆ ಎಮಿಲಿ, ಪ್ಯಾರಾಚೂಟ್ ಗೆ ಹಾನಿ ಮಾಡಿದ್ದರಿಂದ ಅದು ಸರಿಯಾಗಿ ಹಾರದೇ ಆಕೆ ನೆಲಕ್ಕೆ ಅಪ್ಪಳಿಸಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...