alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

srilakn

ಕೊಲಂಬೋ: ಹೈಟೆನ್ಷನ್ ವೈರ್ ಗೆ ಪ್ಯಾರಾಚೂಟ್ ಬಡಿದು ಮಹಿಳಾ ಯೋಧರೊಬ್ಬರು ಗಾಯಗೊಂಡ ಘಟನೆ ಶ್ರೀಲಂಕಾದ ಎಂಬಿಲಿಪಿಯಾದಲ್ಲಿ ನಡೆದಿದೆ.

ಯೋಧರಿಗೆ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿತ್ತು. ಸೇನಾ ತರಬೇತಿ ಕೇಂದ್ರದ ಸಮೀಪದಲ್ಲಿ ಪ್ಯಾರಾಚೂಟ್ ನಲ್ಲಿ ಇಳಿಯುವಾಗ, ಪ್ಯಾರಾಚೂಟ್ ಸೀದಾ ಅಲ್ಲೇ ಹಾದುಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್ ಗೆ ತಾಗಿದೆ. ಪ್ಯಾರಾಚೂಟ್ ಹೊತ್ತಿ ಉರಿದಿದ್ದು, ಆಕೆ ಕೆಳಗೆ ಬಿದ್ದಿದ್ದಾಳೆ. ಅಲ್ಲಿದ್ದವರು ರಕ್ಷಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಸೇನಾ ತರಬೇತಿ ಕೇಂದ್ರದ ಸಮೀಪದಲ್ಲೇ ಹೈ ಟೆನ್ಷನ್ ಲೈನ್ ಹಾದು ಹೋಗಿದ್ದು, ಅಲ್ಲಿಯೇ ಪ್ಯಾರಾಚೂಟ್ ತರಬೇತಿ ನೀಡಲಾಗಿತ್ತು. ಪ್ಯಾರಾಚೂಟ್ ಅವಘಡದ ಈ ಭಯಾನಕ ದೃಶ್ಯವನ್ನು ಅಲ್ಲಿದ್ದವರು ಸೆರೆ ಹಿಡಿದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...