alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿಯನ್ನೇ ಒಳ ನುಗ್ಗಿಸಿ ಎಟಿಎಂ ಕಳವು

forklift-pulls-out-atm-machine-650-facebook_650x400_51503309967

ಟೆಕ್ನಾಲಜಿ ಎಷ್ಟೇ ಮುಂದುವರಿದ್ರೂ ಕಳ್ಳರ ಹಾವಳಿಯನ್ನು ಮಾತ್ರ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ತೂರಿದ್ರೆ, ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಅಮೆರಿಕ ಅರ್ಕಾನ್ಸಾಸ್ ನಲ್ಲಿ ನಡೆದ ಘಟನೆ.

ಇಲ್ಲಿ ಕಳ್ಳರು ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿದ್ದಾರೆ. ಅದಕ್ಕೆ ಅವರು ಬಳಸಿರೋ ತಂತ್ರ ಕೂಡ ಹೊಚ್ಚ ಹೊಸದು. ಇದಕ್ಕಾಗಿ ಫೋರ್ಕ್ ಲಿಫ್ಟ್ ಲಾರಿಯನ್ನೇ ಬಳಸಿದ್ದಾರೆ. ಆಗಸ್ಟ್ 16ರಂದು ರಾತ್ರಿ ಈ ಕೃತ್ಯ ನಡೆದಿದೆ.

ರಾತ್ರಿ ಬ್ಯಾಂಕ್ ಕಾಂಪೌಂಡ್ ಗೆ ನುಗ್ಗಿದ ಕಳ್ಳರು ನೆಲದಲ್ಲಿ ಹೂತಿದ್ದ ಎಟಿಎಂ ಮಷಿನ್ ಅನ್ನೇ ಮೇಲಕ್ಕೆತ್ತಿದ್ದಾರೆ. ನಂತರ ಅದನ್ನು ಲಾರಿಯಲ್ಲಿ ಹೇರಿಕೊಂಡು ಪರಾರಿಯಾಗಿದ್ದಾರೆ. ಈ ಕಸರತ್ತಿನಲ್ಲಿ ಬ್ಯಾಂಕ್ ನ ಸೀಲಿಂಗ್ ಹಾಗೂ ಟೈಲ್ಸ್ ಗೆ ಹಾನಿಯಾಗಿದೆ.

ಎಟಿಎಂನಲ್ಲಿ ಎಷ್ಟು ಹಣವಿತ್ತು ಅನ್ನೋದು ಖಚಿತವಾಗಿಲ್ಲ. ಮರುದಿನ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಬ್ಯಾಂಕ್ ಸಿಬ್ಬಂದಿ ಎಟಿಎಂ ಕಳವಾಗಿರೋದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಳ್ಳತನದ ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...