alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಚಾರದಲ್ಲಿ ಗಂಡ್ಮಕ್ಳೇ ಸ್ಟ್ರಾಂಗೂ ಗುರು

arizona

ವಾಷಿಂಗ್ಟನ್: ಸೈನ್ಸ್ ಪರೀಕ್ಷೆಗಳಲ್ಲಿ ಹುಡುಗರು ಹೆಚ್ಚು ಅಂಕ ಪಡೆಯುತ್ತಾರೆ. ಹೆಣ್ಣುಮಕ್ಕಳು ಹಾಗೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸುತ್ತಾರೆ ಎಂಬ ಸಂಗತಿ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.

ಅಮೆರಿಕದ ಅರಿಜೊನಾ ವಿಶ್ವವಿದ್ಯಾಲಯದ ಸಂಶೋಧಕರು, 3 ವರ್ಷದಲ್ಲಿ 87 ಪದವಿಪೂರ್ವ ವಿಜ್ಞಾನ ಕಾಲೇಜಿನ 4800 ವಿದ್ಯಾರ್ಥಿಗಳನ್ನು ಅಧ್ಯಯನದಲ್ಲಿ ಬಳಸಿಕೊಂಡಿದ್ದು, ಭಾಷಾ ಶಾಸ್ತ್ರ, ಸಮಾಜ ಶಾಸ್ತ್ರ ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ನಡುವೆ ವ್ಯತ್ಯಾಸವೇನು ಕಂಡು ಬಂದಿಲ್ಲ. ಆದರೆ, ವಿಜ್ಞಾನ ವಿಷಯದಲ್ಲಿ ವಿಮರ್ಶಾತ್ಮಕ ಚಿಂತನೆ ಹೆಚ್ಚು ಅಗತ್ಯವಾಗಿದ್ದು, ಇದರಲ್ಲಿ ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ, ಆರ್ಥಿಕವಾಗಿ ಕೆಳಗಿನ ಹಂತದಲ್ಲಿರುವವರು ಕಡಿಮೆ ಅಂಕ ಪಡೆಯುತ್ತಾರೆ ಎಂದು ಹೇಳಲಾಗಿದೆ.

ಇವರ ಇಷ್ಟಕ್ಕೇ ಸೀಮಿತ ಎಂದು ಸಾಮಾನ್ಯ ಚಿಂತನೆಗಳು ಅವರು ಹೆಚ್ಚು ಓದುವುದರ ಬದಲಿಗೆ ಸೀಮಿತಗೊಳಿಸಿಬಿಡುತ್ತವೆ. ಅವರೇ ಚೌಕಟ್ಟನ್ನು ಹಾಕಿಕೊಂಡು ಚಿಂತನಾಶೀಲತೆಯನ್ನು ದುರ್ಬಲಗೊಳಿಸಿಕೊಂಡು ಬಿಡುತ್ತಾರೆ. ಆದರೆ, ಸಂಪೂರ್ಣ ಇದನ್ನು ಅನ್ವಯಿಸಲಾಗುವುದಿಲ್ಲ. ಕೆಲವೊಮ್ಮೆ ಹೆಣ್ಣುಮಕ್ಕಳು, ಕೆಳಸ್ತರದವರೂ ಹೆಚ್ಚು ಅಂಕ ಗಳಿಸುತ್ತಾರೆ ಎನ್ನಲಾಗಿದೆ. ವಿಜ್ಞಾನ ವಿಷಯದ ಗ್ರಹಿಕೆಯಲ್ಲಿನ ಅಸಮಾನತೆ ಹೋಗಲಾಡಿಸಿದಲ್ಲಿ ಉತ್ತಮ ಅಂಕ ಗಳಿಸಬಹುದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...