alex Certify
ಕನ್ನಡ ದುನಿಯಾ       Mobile App
       

Kannada Duniya

ವಿಲ್ ಬರೆಯದೆ ಸಾವನ್ನಪ್ಪಿದ್ರಾ ಮ್ಯೂಸಿಕ್ ಐಕಾನ್…?

ಗ್ರ್ಯಾಮಿ ಅವಾರ್ಡ್ ವಿನ್ನರ್ ಖ್ಯಾತ ಮ್ಯೂಸಿಕ್ ಐಕಾನ್ ಅರೆಥಾ ಫ್ರಾಂಕ್ಲೀನ್ ತಮ್ಮ ನಿಧನದ ನಂತರ ಆಸ್ತಿ ಯಾರ ಪಾಲಾಗಬೇಕು ಅನ್ನೋದಕ್ಕೆ ಯಾವುದೇ ವಿಲ್ ಬರೆದಿರಲಿಲ್ಲ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಆಗಸ್ಟ್ ನಲ್ಲಿ ನಿಧನರಾದ 76 ವರ್ಷದ ಫ್ರಾಂಕ್ಲೀನ್ ಆಕೆಯ ಆಸ್ತಿಯನ್ನು ಪಟ್ಟಿ ಮಾಡಿರಲಿಲ್ಲವಂತೆ. ಅಷ್ಟೇ ಅಲ್ಲ ಅವು ಯಾರಿಗೆ ಸೇರಬೇಕು ಅನ್ನೋದನ್ನ ಮೊದಲೇ ತಿಳಿಸಿರಲಿಲ್ಲವಂತೆ.

ಹಾಗಾಗಿ ಈಗ ಆಸ್ತಿಗೆ ಆಕೆಯ ನಾಲ್ಕು ಮಂದಿ ಮಕ್ಕಳು ಸಮನಾಗಿ ವಾರಸುದಾರರಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಬದುಕಿದ್ದಾಗ ಅವರಿಗೆ ವಕೀಲರು ವಿಲ್ ಬರೆದಿಡುವಂತೆ ಸೂಚನೆ ನೀಡಿದ್ದರು ಫ್ರಾಂಕ್ಲೀನ್ ಅದಕ್ಕೆ ಸಮ್ಮತಿ ಸೂಚಿಸಿರಲಿಲ್ಲವಂತೆ. ಅದು ತಮ್ಮ ಮಕ್ಕಳ ಮತ್ತು ಸಂಬಂಧಿಕರ ಮೇಲೆ ನಂಬಿಕೆ ಇಲ್ಲ ಅನ್ನೋದನ್ನ ತೋರಿಸುತ್ತದೆ. ಹಾಗಾಗಿ ಬದುಕಿದ್ದಾಗ ನಾನು ವಿಲ್ ಮಾಡೋದಿಲ್ಲ ಅಂತ ಫ್ರಾಂಕ್ಲೀನ್ ಹೇಳಿದ್ದರಂತೆ.

ಆಕೆ ಪತಿಯಿಂದ ವಿಚ್ಚೇದನ ಪಡೆದ ಮೇಲೆ ಮತ್ತೊಂದು ಮದುವೆ ಆಗಲಿಲ್ಲ. ನಾಲ್ಕು ಮಕ್ಕಳ ಜವಾಬ್ದಾರಿ ಅವರ ಮೇಲಿತ್ತು. ಅವರಿಗೆ ಅವರ ಅಗತ್ಯ ಏನೆಂದು ಗೊತ್ತಿತ್ತು. ಅವರ ಆಸ್ತಿಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯೋದೇ ಅವರಿಗೆ ಇಷ್ಟ ಇರಲಿಲ್ಲ ಅಂತ ಹೇಳ್ತಿದ್ದಾರೆ ಆಕೆಯ ವಕೀಲರು.
ಹಾಗಾಗಿ ಈಗ ಆಕೆಯ ನಾಲ್ವರು ಪುತ್ರರಿಗೆ ಆಸ್ತಿ ಸಮನಾಗಿ ಹಂಚಿಕೆಯಾಗಲಿದೆ ಅಂತ ಹೇಳಲಾಗ್ತಿದೆ. ಈ ಸಂಬಂಧ ಮಿಶಿಗನ್ ನ್ಯಾಯಾಲಯದಲ್ಲಿ ವಕೀಲರು ಆಸ್ತಿ ಹಂಚಿಕೆಯ ಕಾನೂನು ಪ್ರಕ್ರಿಯೆಗಳನ್ನ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...