alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿಗೆ ಸೌದಿ ದೊರೆಯಿಂದ ಖಡಕ್ ಪ್ರಶ್ನೆ

king-salman-nawaz-sharif-afp_65ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾರಣವೊಡ್ಡಿ ಸೌದಿ ಅರೇಬಿಯಾ ಸೇರಿದಂತೆ ಲಿಬಿಯಾ, ಈಜಿಪ್ಟ್, ಯೆಮೆನ್, ಬಹರೈನ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ತನ್ನ ನೆರೆ ರಾಷ್ಟ್ರ ಕತಾರ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದಲ್ಲದೇ ಬಹಿಷ್ಕಾರ ಹಾಕಿವೆ.

ಇದರ ನಡುವೆ ಈ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮುಂದೆ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಖಡಕ್ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಜೊತೆ ನವಾಜ್ ಷರೀಫ್ ಜೆಡ್ಡಾಗೆ ತೆರಳಿ ಸೌದಿ ದೊರೆ ಸಲ್ಮಾನ್ ಜೊತೆಗಿನ ಮಾತುಕತೆ ವೇಳೆ ಅವರಿಗೆ ಈ ಪ್ರಶ್ನೆ ಎದುರಾಗಿದೆ.

ನವಾಜ್ ಷರೀಫ್ ರಿಗೆ ನೀವು ನಮ್ಮೊಂದಿಗಿರುತ್ತೀರೋ ಅಥವಾ ಕತಾರ್ ಜೊತೆಗೋ ಎಂಬ ಪ್ರಶ್ನೆಯನ್ನು ದೊರೆ ಸಲ್ಮಾನ್ ನೇರವಾಗಿ ಕೇಳಿದ್ದಾರೆನ್ನಲಾಗಿದೆ. ಸದಾ ಇಬ್ಬಂದಿತನದ ನೀತಿ ಅನುಸರಿಸುವ ಪಾಕಿಸ್ತಾನಕ್ಕೆ ಇದರಿಂದ ಈಗ ಸಂದಿಗ್ದ ಪರಿಸ್ಥಿತಿ ಎದುರಾಗಿದ್ದು, ಅತ್ತ ಕತಾರ್ ಜೊತೆಗಿನ ಬಾಂಧವ್ಯ ಬಿಡಲಾರದೆ ಇತ್ತ ಸೌದಿ ಅರೇಬಿಯಾ ಮತ್ತಿತರ ರಾಷ್ಟ್ರಗಳ ಪರ ನಿಲ್ಲದೆ ಮಧ್ಯಮ ನೀತಿಯನ್ನನುಸರಿಸಿಕೊಂಡು ಬಂದಿದ್ದ ಪಾಕಿಸ್ತಾನಕ್ಕೆ ಈಗ ಯಾವುದಾದರೊಂದು ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...