alex Certify
ಕನ್ನಡ ದುನಿಯಾ       Mobile App
       

Kannada Duniya

ಆಪಲ್ ಕಂಪನಿಗೇ ಸೆಡ್ಡು ಹೊಡೆದಿದ್ದಾರೆ ಈ ಸಹೋದರರು

ಇಟಲಿಯಲ್ಲಿ ಡಿಸೈನರ್ ಉಡುಪುಗಳನ್ನು ಖರೀದಿಸಲು ಹೋದ್ರೆ ನಿಮಗೆ ಸ್ಟೀವ್ ಜಾಬ್ಸ್ ಜೀನ್ಸ್ ಸಿಕ್ಕಿದ್ರೂ ಅಚ್ಚರಿಯಿಲ್ಲ. ಆ್ಯಪಲ್ ಕಂಪನಿಯೇ ಸ್ಟೀವ್ ಜಾಬ್ಸ್ ಜೀನ್ಸ್ ಮಾರಾಟ ಮಾಡ್ತಿದೆ ಅಂದುಕೊಳ್ಬೇಡಿ. ಕಂಪನಿಗೂ ಸ್ಟೀವ್ ಜಾಬ್ ಜೀನ್ಸ್ ಗೂ ಸಂಬಂಧವೇ ಇಲ್ಲ.

ವಿನ್ಸೆನ್ಜೋ ಮತ್ತು ಜಿಯಾಕೊಮೊ ಬಾರ್ಬಟೊ ಎಂಬ ಯುವಕರು 2012 ರಲ್ಲಿ ತಮ್ಮದೇ ಕಂಪನಿಯೊಂದನ್ನು ಶುರು ಮಾಡಲು ನಿರ್ಧರಿಸಿದ್ರು. ಕಂಪನಿಗೆ ಹೆಸರೇನು ಇಡಬೇಕು ಅನ್ನೋ ಯೋಚನೆಯಲ್ಲಿದ್ದಾಗ ಅವರಿಗೆ ಹೊಳೆದಿದ್ದು ಸ್ಟೀವ್ ಜಾಬ್ಸ್ ಹೆಸರು. ಯಾಕಂದ್ರೆ ಆ್ಯಪಲ್ ಕಂಪನಿ ಸ್ಟೀವ್ ಜಾಬ್ಸ್ ಹೆಸರನ್ನು ಬ್ರಾಂಡ್ ನೇಮ್ ಆಗಿ ಬಳಸಿಕೊಂಡಿಲ್ಲ.

ಈ ಸಹೋದರರ ವಿರುದ್ಧ ಆ್ಯಪಲ್ ಕಂಪನಿ ಕೇಸ್ ದಾಖಲಿಸಿತ್ತು. ಕಂಪನಿಯ ಜೆ ಎಂಬ ಲೋಗೋವನ್ನು ಆ್ಯಪಲ್ ಲೋಗೋದಿಂದ ಐಡಿಯಾ ಕದ್ದು ಮಾಡಲಾಗಿದೆ ಅಂತಾ ಆರೋಪಿಸಿತ್ತು. ಆದ್ರೆ ಆ್ಯಪಲ್ ಸಂಸ್ಥೆಯ ಆರೋಪವನ್ನು ತಳ್ಳಿ ಹಾಕಿರೋ ಕೋರ್ಟ್, ಸಹೋದರರ ಪರ ತೀರ್ಪು ನೀಡಿದೆ.

ಹಾಗಾಗಿ ಸ್ಟೀವ್ ಜಾಬ್ಸ್ ಕಂಪನಿ ತನ್ನ ವಹಿವಾಟನ್ನು ಇನ್ನಷ್ಟು ವಿಸ್ತರಿಸಿದೆ. ಇಟಲಿಯಲ್ಲಿರುವ ಆ್ಯಪಲ್ ಮಳಿಗೆಯ ಪಕ್ಕದಲ್ಲೇ ಸ್ಟೀವ್ ಜಾಬ್ಸ್ ಸ್ಟೋರ್ ಇದ್ದು, ಪವರ್ ಬ್ಯಾಂಕ್ ಗಳನ್ನು ಮಾರಾಟ ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...