alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷಾ ಚಾಲನೆ ವೇಳೆ ಅಪಘಾತಕ್ಕೊಳಗಾದ ಆಪಲ್ ಸ್ವಯಂ ಚಾಲಿತ ಕಾರ್

ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಸ್ವಯಂ ಚಾಲಿತ ಕಾರು ಪರೀಕ್ಷಾ ಚಾಲನೆ ವೇಳೆ ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ಕಾರಿಗೆ ಸ್ವಲ್ಪ ಹಾನಿಯಾಗಿದೆ ಎನ್ನಲಾಗಿದೆ. ವರದಿ ಪ್ರಕಾರ, ಒಂದು ವಾರದ ಹಿಂದೆ ಅಮೆರಿಕಾದ ಸನ್ನಿವೇಲ್ ಪ್ರದೇಶದಲ್ಲಿ ಆಪಲ್ ಸ್ವಯಂಚಾಲಿತ ಕಾರು ಅಪಘಾತಕ್ಕೊಳಗಾಗಿತ್ತಂತೆ. ಇದನ್ನು ಆಪಲ್ ಕಂಪನಿ ಸ್ಪಷ್ಟಪಡಿಸಿದೆ.

ಅಪಘಾತಕ್ಕೆ ಆಪಲ್ ಕಾರಣವಲ್ಲ ಎನ್ನಲಾಗಿದೆ. ಆಪಲ್ ಸಾಪ್ಟ್ವೇರ್ ಕೆಲಸ ಮಾಡುತ್ತಿತ್ತಂತೆ. ಕಾರು ಆಟೋಮೇಟಿಕ್ ಸ್ಥಿತಿಯಲ್ಲಿದ್ದಾಗ ಘಟನೆ ನಡೆದಿದೆ. ಆಪಲ್ ಸ್ವಯಂ ಚಾಲಿತ ಕಾರಿಗೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಆಪಲ್ ಸ್ವಯಂ ಚಾಲಿತ ಕಾರು ಹಾಗೂ ಡಿಕ್ಕಿ ಹೊಡೆದ ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಭವಿಷ್ಯದಲ್ಲಿ ಆಪಲ್ ಸ್ವಯಂ ಚಾಲಿತ ಕಾರು ಸುರಕ್ಷಿತ ಎನ್ನಲಾಗ್ತಾಯಿತ್ತು. ಆದ್ರೆ ಈ ಕಾರು ಕೂಡ  ಅನೇಕ ಕಡೆ ಅಪಘಾತಕ್ಕೊಳಗಾಗಿದೆ. ಆಪಲ್, ಅಮೆರಿಕಾದ ರಸ್ತೆಗಳಲ್ಲಿ ಸ್ವಯಂ ಚಾಲಿತ ಕಾರುಗಳ ಪರೀಕ್ಷೆ ನಡೆಸುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...