alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ತಲೆಯೆತ್ತಲಿದೆ ಅತಿ ದೊಡ್ಡ ಕ್ಯಾಂಪಸ್

ಅಮೆರಿಕದಲ್ಲಿರೋ ತಂತ್ರಜ್ಞರಿಗಾಗಿ ಆ್ಯಪಲ್ ಕಂಪನಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲು ಮುಂದಾಗಿದೆ. ಮುಂದಿನ 5 ವರ್ಷಗಳಲ್ಲಿ 20,000 ಉದ್ಯೋಗ ಸೃಷ್ಟಿಸಲು ಯೋಜನೆ ಹಾಕಿಕೊಂಡಿದೆ. ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಇನ್ನೂ ನಿಗದಿಯಾಗಿಲ್ಲ.

ಕೇವಲ ತಂತ್ರಜ್ಞರು ಮಾತ್ರವಲ್ಲದೆ ಕಂಪನಿಯ ಉಳಿದ ವಿಭಾಗಗಳನ್ನೂ ವಿಸ್ತರಿಸಲು ಯೋಜನೆ ರೂಪಿಸುತ್ತಿದೆ. ಸದ್ಯ ಟೆಕ್ಸಾಸ್ ನ ಆಸ್ಟಿನ್ ನಲ್ಲಿ ಆ್ಯಪಲ್ ಕಂಪನಿಯ ಬೃಹತ್ ಕ್ಯಾಂಪಸ್ ಇದೆ. ಅಲ್ಲಿ 6000 ಉದ್ಯೋಗಿಗಳು ಕೆಲಸ ಮಾಡ್ತಾರೆ.

ಇನ್ನೊಂದೆಡೆ ಕ್ಯುಪರ್ಟಿನೊದಲ್ಲಿ ಆ್ಯಪಲ್ ಪಾರ್ಕ್ ಅನ್ನೇ ನಿರ್ಮಾಣ ಮಾಡಲಾಗಿದೆ. ಉದ್ಯೋಗಿಗಳನ್ನೆಲ್ಲ ಅಲ್ಲಿಗೆ ಸ್ಥಳಾಂತರಿಸುವ ಕಾರ್ಯ ಕೂಡ ನಡೆಯುತ್ತಿದೆ. ಇನ್ನೈದು ವರ್ಷಗಳಲ್ಲಿ 20,000 ಜನರನ್ನು ನೇಮಕ ಮಾಡಿಕೊಂಡ್ರೆ, ಆ್ಯಪಲ್ ಕಂಪನಿ ಅಮೆರಿಕದಲ್ಲೇ 84,000 ನೌಕರರನ್ನು ಹೊಂದಿದಂತಾಗುತ್ತದೆ. ಹಾಗಾಗಿ ಹೊಸ ಕ್ಯಾಂಪಸ್ ಆ್ಯಪಲ್ ಪಾರ್ಕ್ ಗಿಂತಲೂ ವಿಸ್ತಾರವಾಗಿರಲಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...