alex Certify
ಕನ್ನಡ ದುನಿಯಾ       Mobile App
       

Kannada Duniya

OMG!15 ವರ್ಷ ಕಿರಿಯನನ್ನು ಮದುವೆಯಾಗಲು 5 ಕೋಟಿ ರೂ. ಆಫರ್ ನೀಡಿದ ಮಹಿಳೆ

ಪ್ರೀತಿಯನ್ನು ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಅನ್ನೋ ಮಾತಿದೆ. ಆದ್ರೆ ಹಣ ಕೊಟ್ಟು ನೀವು ಇಷ್ಟಪಟ್ಟವರನ್ನು ಮದುವೆ ಮಾಡಿಕೊಳ್ಳಬಹುದು. ಇದಕ್ಕೆ ಸಾಕ್ಷಿ ಚೀನಾದಲ್ಲಿ ನಡೆದಿರೋ ಮದುವೆ.

ಮಹಿಳೆಯೊಬ್ಬಳು 5 ಮಿಲಿಯನ್ ಯುವಾನ್ ಅಂದ್ರೆ ಸುಮಾರು 5 ಕೋಟಿ ರೂಪಾಯಿಯನ್ನು ವರದಕ್ಷಿಣೆಯಾಗಿ ಕೊಟ್ಟು ತನಗಿಂತ 15 ವರ್ಷ ಕಿರಿಯ ಯುವಕನನ್ನು ಮದುವೆಯಾಗಿದ್ದಾಳೆ.

ಮಹಿಳೆಗೆ ಈಗ 38 ವರ್ಷ, 14 ವರ್ಷದ ಮಗನಿದ್ದಾನೆ. ಪ್ರಿಯತಮ ಆಕೆಗಿಂತ 15 ವರ್ಷ ಚಿಕ್ಕವನು, ಅವನಿಗಿನ್ನೂ 23ರ ಹರೆಯ. ಇವರ ಮದುವೆಗೆ ಯುವಕನ ಹೆತ್ತವರು ಒಪ್ಪಿರಲಿಲ್ಲ. ಹಾಗಾಗಿ 5 ಕೋಟಿ ರೂಪಾಯಿ ಕೊಡುವುದಾಗಿ ಮಹಿಳೆ ಆಫರ್ ನೀಡಿದ್ದಳು.

ಇದಕ್ಕೆ ಯುವಕನ ಪೋಷಕರು ಸಮ್ಮತಿಸಿದ್ದಾರೆ. ಜನವರಿ 10ರಂದು ಈ ಅಪರೂಪದ ವಿವಾಹ ನೆರವೇರಿದೆ. ಮಹಿಳೆಯ ಬಳಿಯಿರೋ ಹಣ, ಆಭರಣ, ಐಷಾರಾಮಿ ಕಾರು ಇವನ್ನೆಲ್ಲ ನೋಡಿದ ಮೇಲೆ ವರನ ಹೆತ್ತವರು ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...