alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಬಳಕೆದಾರರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಈ ಆಧುನಿಕ ಕಾಲದಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಒಂದು ಅಗತ್ಯ. ಆದರೆ ಕೆಲವರು ಈ ಸ್ಮಾರ್ಟ್ ಫೋನ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಇನ್ನು ಕೆಲವರು ಯಾವಾಗಲೂ ಅದರಲ್ಲೇ ಮುಳುಗಿರುತ್ತಾರೆ. ಆದರೆ ಹೊಸ ಸಂಶೋಧನೆಯೊಂದರ ಪ್ರಕಾರ ಯಾರು ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿರುತ್ತಾರೋ ಅಂಥವರು  ಸ್ಮಾರ್ಟ್ ಫೋನ್ ಗೀಳಿಗೆ ಒಳಗಾಗಿರುತ್ತಾರೆ.

ಲಂಡನ್ ನ ಯುನಿವರ್ಸಿಟಿ ಆಫ್ ಡರ್ಬಿ ಅಂಡ್ ನಾಟಿಂಗ್ ಹ್ಯಾಮ್ ಟ್ರೆಂಟ್ ಯುನಿವರ್ಸಿಟಿಯಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಯಾರಿಗೆ ಮಾನಸಿಕ ಒತ್ತಡ, ಆತಂಕ, ಖಿನ್ನತೆ, ಕೌಟುಂಬಿಕ ಸಮಸ್ಯೆ, ಮಾನಸಿಕ ಅಸ್ಥಿರತೆಯ ಮಟ್ಟ ಯಾರಿಗೆ ಹೆಚ್ಚು ಹೆಚ್ಚು ಇರುತ್ತೋ ಅವರು ಅಷ್ಟೇ ಹೆಚ್ಚೆಚ್ಚು ಸ್ಮಾರ್ಟ್ ಫೋನ್ ನಲ್ಲಿ ಮುಳುಗಿರುತ್ತಾರೆ.

ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಫೇಸ್ ಬುಕ್, ಟ್ವಿಟ್ಟರ್, ಬೇರೆಯವರ ಪೋಟೋಗಳನ್ನು, ಕಾಮೆಂಟ್ ಗಳನ್ನು, ಪೋಸ್ಟ್ ಗಳನ್ನು ಬ್ರೌಸ್ ಮಾಡುತ್ತಿರುತ್ತಾರೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...