alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಹರಾಜಾಯ್ತು ಪ್ರಧಾನಿ ಮಾನ

pak nawaz

ವಸ್ತುಗಳು, ವಾಹನ, ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ಸ್ ಮೊದಲಾದವುಗಳನ್ನು ಮಾತ್ರ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಕೆಲವೊಮ್ಮೆ ತಮಾಷೆಗೆ ವ್ಯಕ್ತಿಗಳನ್ನು ಮಾರಾಟಕ್ಕೆ ಇಟ್ಟ ಉದಾಹರಣೆಗಳೂ ನಡೆದಿವೆ. ಒಮ್ಮೆ ಸೊಸೆ ಅತ್ತೆಯನ್ನೇ ಮಾರಾಟಕ್ಕೆ ಇಟ್ಟಿದ್ದಳು. ಅದಾದ ನಂತರ ವ್ಯಕ್ತಿಯೊಬ್ಬ, ಪತ್ನಿಯನ್ನೇ ಮಾರಾಟಕ್ಕೆ ಇಟ್ಟು ಸುದ್ದಿಯಾಗಿದ್ದ.

ಇದೀಗ, ಪ್ರಧಾನಿಯನ್ನೇ ಮಾರಾಟಕ್ಕೆ ಇಟ್ಟ ಘಟನೆ ವರದಿಯಾಗಿದೆ. ಆನ್ ಲೈನ್ ಮಾರ್ಕೇಟಿಂಗ್ ebayನಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರನ್ನು ಮಾರಾಟಕ್ಕೆ ಇಡಲಾಗಿದೆ. ನವಾಜ್ ಶರೀಫ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಲಂಡನ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ನವಾಜ್ ಶರೀಫ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಅನಾಮಿಕನೊಬ್ಬ ebay ಆನ್ ಲೈನ್ ಮಾರ್ಕೇಂಟಿಂಗ್ ನಲ್ಲಿ ಅವರನ್ನೇ ಮಾರಾಟಕ್ಕೆ ಇಟ್ಟಿದ್ದು, 66,200 ಪೌಂಡ್ ಬೆಲೆ ನಿಗಧಿಪಡಿಸಲಾಗಿದೆ.

ಪನಾಮ ಪೇಪರ್ಸ್ ನಲ್ಲಿ ಸೋರಿಕೆಯಾದ ಮಾಹಿತಿಯಂತೆ ನವಾಜ್ ಶರೀಫ್ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಕಂಪನಿ ಹೊಂದಿದ್ದು, ಬಹಿರಂಗವಾದ ಹಿನ್ನೆಲೆಯಲ್ಲಿ ಅವರನ್ನು ಮಾರಾಟಕ್ಕೆ ಇಟ್ಟಿದ್ದು, ಯೂಸ್ ಲೆಸ್ ಪ್ರಧಾನಿ ಮಾರಾಟಕ್ಕೆ ಇದ್ದಾರೆ ಎಂದು ಬರೆಯಲಾಗಿದೆ. ಅವರನ್ನು ಖರೀದಿಸಲು ಅಪಾರ ಜನ ಬಿಡ್ ಮಾಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...