alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲಗಲಿಸಿ ಕುಳಿತುಕೊಳ್ಳುವ ಪುರುಷರ ಮೇಲೆ ಬ್ಲೀಚ್ ನೀರು ಹಾಕ್ತಾಳೆ ಹುಡುಗಿ

ಮೆಟ್ರೋದಲ್ಲಿ ಕಾಲಗಲಿಸಿ ಕುಳಿತುಕೊಳ್ಳುವ ಪುರುಷರ ಮೇಲೆ ಬ್ಲೀಚ್ ನೀರು ಹಾಕ್ತಾಳೆ ಹುಡುಗಿ

ಮೆಟ್ರೋದಲ್ಲಿ ಆರಾಮವಾಗಿ ಕುಳಿತಿದ್ದಾಗ ನಿಮ್ಮ ಕಾಲಿನ ಮಧ್ಯೆ ನೀರು ಹಾಕಿದ್ರೆ ಹೇಗಾಗಬೇಡ? ರಷ್ಯಾದ ಹುಡುಗಿಯೊಬ್ಬಳು ಇದೇ ಕೆಲಸ ಮಾಡ್ತಿದ್ದಾಳೆ. ಅನ್ನಾ ದುವಾಗಾಲಿಕ್ ಹೆಸರಿನ ಹುಡುಗಿ ಲಿಂಗತಾರತಮ್ಯ ವಿರುದ್ಧ ಈ ರೀತಿ ತನ್ನ ವಿರೋಧ ವ್ಯಕ್ತಪಡಿಸುತ್ತಿದ್ದಾಳೆ.

ಕಾಲು ಅಗಲ ಮಾಡಿ ಕುಳಿತುಕೊಳ್ಳುವ ಪುರುಷರ ಕಾಲ ಮೇಲೆ ನೀರನ್ನು ಹಾಕ್ತಾಳೆ. ಇದು ಬ್ಲೀಚ್ ಮಿಶ್ರಿತ ನೀರಾಗಿದೆ. 30 ಲೀಟರ್ ನೀರಿಗೆ 6 ಲೀಟರ್ ಬ್ಲೀಚ್ ಹಾಕುತ್ತಾಳಂತೆ. ಇದನ್ನು ಬಾಟಲಿಯಲ್ಲಿ ತುಂಬುತ್ತಾಳೆ. ಮೆಟ್ರೋದಲ್ಲಿ ಕಾಲು ಅಗಲ ಮಾಡಿ ಕುಳಿತಿರುವ ಯುವಕರ ಮೇಲೆ ಈ ನೀರನ್ನು ಹಾಕ್ತಾಳೆ.

ಅನ್ನಾ ದುವಾಗಾಲಿಕ್ ಕಾನೂನು ವಿದ್ಯಾರ್ಥಿನಿಯಾಗಿದ್ದಾಳೆ. ವಿಶ್ವದಲ್ಲಿ ಹೀಗೆ ಕುಳಿತುಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ನಾನು ಈ ರೀತಿ ವಿರೋಧ ಶುರು ಮಾಡಿದ್ದೇನೆ. ಬ್ಲೀಚ್ ನೀರು ಹಾಕ್ತಿದ್ದಂತೆ ಬಟ್ಟೆ ಬಣ್ಣ ಬೆಳ್ಳಗಾಗುತ್ತದೆ. ಆಗ ಜನರು ಕಾಲು ಅಗಲಿಸಿ ಕುಳಿತುಕೊಳ್ಳುವುದನ್ನು ಬಿಡ್ತಾರೆ ಎಂದು ಅನ್ನಾ ದುವಾಗಾಲಿಕ್  ಹೇಳಿದ್ದಾಳೆ. ವ್ಲಾಡಿಮಿರ್ ಪುಟಿನ್ ಸಹ ಇದೇ ರೀತಿ ಕುಳಿತುಕೊಳ್ತಾರಲ್ಲ ಎಂಬ ಪ್ರಶ್ನೆಗೆ ಮಾತ್ರ ಅನ್ನಾ ಯಾವುದೇ ಉತ್ತರ ನೀಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...