alex Certify
ಕನ್ನಡ ದುನಿಯಾ       Mobile App
       

Kannada Duniya

ಶತ್ರುಗಳ ‘ಡ್ರೋನ್’ ನಿಯಂತ್ರಣಕ್ಕೆ ‘ಗಿಡುಗ’ !

DRONE

ಇತ್ತೀಚೆಗೆ ಡ್ರೋನ್ ಗಳ ಬಳಕೆ ಹೆಚ್ಚುತ್ತಿದೆ. ಭದ್ರತೆಯ ದೃಷ್ಟಿಯಿಂದ ಡ್ರೋನ್ ಕ್ಯಾಮೆರಾಗಳ ಬಳಕೆ ಅನಿವಾರ್ಯವೂ ಹೌದು. ಆದರೆ ದುರುದ್ದೇಶಕ್ಕಾಗಿ ಬಳಸಲ್ಪಡುವ ಡ್ರೋನ್ ಗಳ ನಿಯಂತ್ರಣಕ್ಕೆ ಇದೀಗ ಗಿಡುಗಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅರೇ, ಇದೇನು ಅಚ್ಚರಿ ಅಂತೀರಾ..? ಈ ಸ್ಟೋರಿ ಓದಿ.

ಹೌದು. ಶತ್ರು ದೇಶಗಳ ಡ್ರೋನ್ ಬಳಕೆ ಇದೀಗ ಎಲ್ಲಾ ದೇಶಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದನ್ನು ನಿಯಂತ್ರಿಸಲು ನೆದರ್ಲ್ಯಾಂಡ್ ಪೊಲೀಸರು ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ಶತ್ರುಗಳು ಗಡಿಯೊಳಗೆ ಬಿಡುವ ಡ್ರೋನ್ ಮೇಲೆ ದಾಳಿ ಮಾಡಲು ಗಿಡುಗಗಳಿಗೆ ತರಬೇತಿ ನೀಡಲಾಗಿದ್ದು, ಇವು ಡ್ರೋನ್ ಮೇಲೆ ಹಾರಿ ಅವುಗಳನ್ನು ಹೊತ್ತು ತಂದು ಕೊಡುತ್ತವೆ.

ವಿಶೇಷವೆಂದರೆ ಡ್ಯಾನಿಷ್ ಬರ್ಡ್ ಟ್ರೈನಿಂಗ್ ಕಂಪನಿಯಲ್ಲಿ ಪಳಗಿರುವ ಗಿಡುಗಗಳು, ಪೊಲೀಸರ ಸೂಚನೆಯಂತೆ ಡ್ರೋನ್ ಹಿಡಿದು, ಕೆಳಗೆ ತಂದು ಬಿಡುತ್ತವೆ. ಈ ತರಬೇತಿಯಲ್ಲಿ ಪೊಲೀಸರು ರಿಮೋಟ್ ಮೂಲಕ ಡ್ರೋನ್ ಹಾರಿಸಿ ಗಿಡುಗಗಳಿಂದ ತೆಗೆದುಕೊಂಡು ಬರುವುದಕ್ಕೆ ತರಬೇತಿ ನೀಡಿದ್ದು, ಒಟ್ಟಾರೆ ಗಿಡುಗಗಳು ನೆದರ್ಲ್ಯಾಂಡ್ ಪಾಲಿಗೆ ನಿಜವಾದ ಸುರಕ್ಷಾ ಕವಚವೆನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...