alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿ ತಾಳಲಾರದೆ ಹೆಪ್ಪುಗಟ್ಟಿ ಸಾಯುತ್ತಿವೆ ಮೂಕ ಪ್ರಾಣಿಗಳು

ಈ ಬಾರಿಯ ಚಳಿಗಾಲ ಅದೆಷ್ಟೋ ದೇಶಗಳಲ್ಲಿ ನರಕಸದೃಶವಾಗಿದೆ. ತಾಪಮಾನ ಭಾರೀ ಇಳಿಕೆ ಕಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳೆಲ್ಲ ಹೆಪ್ಪುಗಟ್ಟಿವೆ. ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸೈಬೀರಿಯಾದ ಒಮೈಕಾನ್ ಎಂಬ ಗ್ರಾಮವಂತೂ ಸಂಪೂರ್ಣ ಹೆಪ್ಪುಗಟ್ಟಿದೆ. ಇಲ್ಲಿನ ತಾಪಮಾನ ಎಷ್ಟು ಗೊತ್ತಾ? -62 ಡಿಗ್ರಿ ಸೆಲ್ಸಿಯಸ್. ಜಗತ್ತಿನಲ್ಲಿ ಅತಿ ಹೆಚ್ಚು ಶೀತ ದಾಖಲಾಗಿರುವ ಪ್ರದೇಶ ಇದು. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳಿಗೆ ಕೂಡ ಬದುಕುವುದೇ ಕಷ್ಟವಾಗಿದೆ.

ಕಜಕಿಸ್ತಾನದಲ್ಲೂ -56 ಡಿಗ್ರಿ ತಾಪಮಾನವಿದ್ದು, ಪ್ರಾಣಿ- ಪಕ್ಷಿಗಳು ಪ್ರಾಣ ಕಳೆದುಕೊಳ್ತಿವೆ. ಪ್ರಾಣಿಗಳು ಹೆಪ್ಪುಗಟ್ಟಿ ಸತ್ತು ಹೋಗ್ತಿವೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ನಾಯಿ, ಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳು ಹಿಮದ ಮಧ್ಯೆಯೇ ಹೆಪ್ಪುಗಟ್ಟಿ ಕೊನೆಯುಸಿರೆಳೆದಿವೆ. ಹಕ್ಕಿಗಳು ತಂತಿಗಳ ಮೇಲೆ ಶವವಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...