alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಗೆ ಕಡಿದಿತ್ತು ಕೀಟ, ಮುಂದೆ ನಡೆದಿದ್ದು ಭಯಾನಕ!

ಕಾಡಿನಲ್ಲಿ ವಿಚಿತ್ರ ಕೀಟವೊಂದು ಕಡಿದಿದ್ದರಿಂದ ಮೃಗಾಲಯದ ಮಾಲೀಕಳೊಬ್ಬಳಿಗೆ ವಿಚಿತ್ರ ಖಾಯಿಲೆ ಆವರಿಸಿದೆ. ಆಕೆ ದಿನೇ ದಿನೇ ಕಲ್ಲಾಗಿ ಬದಲಾಗುತ್ತಿದ್ದಾಳೆ. 2015ರಲ್ಲಿ ರೆಬೆಕಾ ವಿಲ್ಲರ್ಸ್ ಎಂಬ ಮಹಿಳೆ ಇಂಡೋನೇಷ್ಯಾದ ಕೆರ್ನ್ಸಿ ಸೆಬ್ಲಾಟ್ ನ್ಯಾಶನಲ್ ಪಾರ್ಕ್ ಗೆ ಭೇಟಿ ನೀಡಿದ್ಲು.

ಅಲ್ಲಿ ರೆಬೆಕಾಗೆ ಕೀಟವೊಂದು ಕಡಿದಿತ್ತು. ಅದ್ರಿಂದಾಗಿ ಡಿಫ್ಯೂಸ್ ಸಿಸ್ಟೆಮಿಕ್ ಸ್ಕ್ಲೆರೋಸಿಸ್ ಅನ್ನೋ ಭಯಾನಕ ಖಾಯಿಲೆ ಆವರಿಸಿದೆ. ಈ ಸೋಂಕು ತಗುಲಿದವರು ಸಾಮಾನ್ಯವಾಗಿ 5 ವರ್ಷಗಳೊಳಗೆ ಸಾವನ್ನಪ್ಪುತ್ತಾರೆ. ಈಗಾಗ್ಲೇ ರೆಬೆಕಾಳ ದೇಹ ಮರಗಟ್ಟುತ್ತಿದೆ.

ಬ್ರಶ್ ಮಾಡಲು ಕೂಡ ಆಗದಂತಹ ಸ್ಥಿತಿ ಅವಳದ್ದು. ಟ್ರೆಕ್ಕಿಂಗ್ ಗಾಗಿ ಹೋಗಿದ್ದ ರೆಬೆಕಾಗೆ ಆ ಪ್ರವಾಸವೇ ಮಾರಕವಾಗಿಬಿಟ್ಟಿದೆ. ಕೇಂಬ್ರಿಡ್ಜ್ ಶೈರ್ ನಲ್ಲಿ ಖುದ್ದು ರೆಬೆಕಾ ಮೃಗಾಲಯವನ್ನು ನಡೆಸ್ತಿದ್ದಾಳೆ. ಶೆಪ್ರೆತ್ ವೈಲ್ಡ್ ಲೈಫ್ ಪಾರ್ಕ್ ಅನ್ನೋ ಝೂ ಒಂದನ್ನು ಇಟ್ಕೊಂಡಿದ್ದಾಳೆ.

ಇನ್ನು 3 ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಅಂತಾ ವೈದ್ಯರು ಎಚ್ಚರಿಸಿದ್ದಾರಂತೆ. ರೆಬೆಕಾಳ ದೇಹದೊಳಗಿನ ಅಂಗಾಂಗಳಿಗೆ ಕೂಡ ಸೋಂಕು ತಗುಲಿರುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ. ಚಿಕಿತ್ಸೆಯ ವೆಚ್ಚ ಭರಿಸಲಾಗದೇ ರೆಬೆಕಾ ತನ್ನ ಮೃಗಾಲಯವನ್ನೇ ಮಾರಾಟಕ್ಕಿಟ್ಟಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...