alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹುಲಿಗೆ ನೀಡಿರುವ ಹಿಂಸೆಯ ದೃಶ್ಯ….

ಸರ್ಕಸ್ ಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳಿಗೆ ಹಿಂಸೆ ನೀಡ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳು ಬಂಧಿಯಾಗಿದ್ದರೂ, ಅವುಗಳಿಗೆ ಹಿಂಸೆ ನೀಡುವುದಿಲ್ಲ. ಆದರೆ, ಪಟ್ಟಾಯದ ಮೃಗಾಲಯವೊಂದರಲ್ಲಿ ಹುಲಿ ಘರ್ಜಿಸುವುದನ್ನು ಕಂಡ್ರೆ ಅಯ್ಯೋ ಅನಿಸದಿರದು.

ಮೃಗಾಲಯಕ್ಕೆ ಬರುವ ಪ್ರವಾಸಿಗರು ಹುಲಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ. ಈ ವೇಳೆ ಮೃಗಾಲಯದ ಸಿಬ್ಬಂದಿ ಹುಲಿಗೆ ಹಿಂಸೆ ನೀಡಿ, ಬಲವಂತದಿಂದ ಅದು ಫೋಟೋಗೆ ಪೋಸ್ ಕೊಡುವಂತೆ ಮಾಡ್ತಾರೆ.

ಪ್ರವಾಸಿಗರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹುಲಿಯನ್ನು ಹುರಿದುಂಬಿಸುವ ಉದ್ದೇಶದಿಂದ ಅವುಗಳಿಗೆ ಹಿಂಸೆ ನೀಡಲಾಗ್ತಿದೆ.

ಮೃಗಾಲಯಕ್ಕೆ ಬರುವ ಪ್ರವಾಸಿಗರು ಹುಲಿಯ ಸಮೀಪಕ್ಕೆ ಹೋಗಿ ಫೋಟೋ, ಸೆಲ್ಫಿ ತೆಗೆದುಕೊಳ್ತಾರೆ. ಮತ್ತೆ ಕೆಲವರು ಅದರ ಮೇಲೆ ಕೈ ಹಾಕಿ, ಹಿಂಸೆ ಕೊಡ್ತಾರೆ.

ಹುಲಿಗೆ ಅಲ್ಲಿನ ಸಿಬ್ಬಂದಿ ಹಿಂಸೆ ನೀಡ್ತಿರುವ ಫೋಟೋವನ್ನು ತೆಗೆದವರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೈರಲ್ ಆಗಿದೆ. ಹುಲಿಗೆ ಹಿಂಸೆ ನೀಡಿರುವ ವಿಚಾರ ಗಮನಕ್ಕೆ ಬರುತ್ತಲೇ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಪ್ರವಾಸಿಗರಿಗೂ ಬಲವಂತವಾಗಿ ಫೋಟೋ ತೆಗೆಸಿಕೊಳ್ಳಲು ನಿರ್ಬಂಧ ಹೇರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...